ಬೆಂಗಳೂರಲ್ಲಿ ಸಂಚರಿಸಲಿವೆ ಎಲೆಕ್ಟ್ರಿಕಲ್ ಡಬ್ಬಲ್ ಡೆಕ್ಕರ್ ಬಸ್

ಬೆಂಗಳೂರು,ಫೆ.20- ರಾಜಧಾನಿ ಬೆಂಗಳೂರು ಮಹಾ ಜನತೆಯ ಬಹು ದಿನಗಳ ಕನಸು ನನಸಾಗಾಲಿದೆ. ಶೀಘ್ರದಲ್ಲೇ ಡಬಲ್ ಡೆಕ್ಕರ್ ಬಸ್‍ನಲ್ಲಿ ಪ್ರಯಾಣಿಸುವ ಸೌಲಭ್ಯ ಪಡೆಯಲಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸುತ್ತಿದ್ದವು. ಆದರೆ ದಶಕಗಳ ಹಿಂದೆಯೇ ಇವುಗಳನ್ನು ಸೇವೆಯಿಂದ ಹಿಂಪಡೆಯಲಾಗಿತ್ತು. ಬೆಂಗಳೂರಿನ ಯುವ ಜನತೆಗೆ ಡಬಲ್ ಡೆಕ್ಕರ್ ಬಸ್‍ನಲ್ಲಿ ಸಂಚರಿಸಿದ ಅನುಭವವೇ ಇಲ್ಲ. ಇದೀಗ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್‍ಗಳ ಸೇವೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ನೂತನವಾಗಿ ರಸ್ತೆಗೆ ಇಳಿಯಲಿರುವ ಡಬಲ್ ಡೆಕ್ಕರ್ ಬಸ್‍ಗಳಲ್ಲಿ ಮತ್ತೊಂದು ವಿಶೇಷತೆಯೂ ಇದೆ. […]

ವಿದ್ಯುತ್ ಅವಘಡಕ್ಕೆ ಮೂವರು ಬಲಿ

ಟಿ,ನರಸೀಪುರ, ನ.6- ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್‌ನಿಂದ ವಿದ್ಯುತ್ ಪ್ರವಹಿಸಿ ಮೂವರು ದುರಂತ ಸಾವನ್ನಪ್ಪಿರುವ ಘಟನೆ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ತಾಲೂಕಿನ ನಿಲಸೋಗೆ ಗ್ರಾಮದ ರಾಚೇಗೌಡ ಎಂಬುವರ ಗದ್ದೆಯಲ್ಲಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗ್ರಾಮದ ರಾಚೇಗೌಡ (62), ಅವರ ಪುತ್ರ ಹರೀಶ್ (39) ಹಾಗೂ ಕೂಲಿ ಕಾರ್ಮಿಕ ಮಹದೇವಸ್ವಾಮಿ (40) ಎಂಬುವವರು ಸಾವನ್ನಪ್ಪಿದ್ದಾರೆ. ಗ್ರಾಮದ ವೀರತ್ತ ಸ್ವಾಮಿ ಯವರ ಚೌಲ್ಟ್ರಿ ಪಕ್ಕದ ರಾಚೇಗೌಡರ ಜಮೀನಿನಲ್ಲಿ ಬೆಳೆಯಲಾಗಿದ್ದ ಭತ್ತದ ಫಸಲಿಗೆ ಇಂದು ಬೆಳಿಗ್ಗೆ […]