ಹಲವು ವರ್ಷಗಳ ನಂತರ ಎದ್ದು ನಿಂತ 40 ಟನ್ ತೂಕದ ಆನೆ..!

ಬೇಲೂರು,ಜ.21- ತಾಲೂಕಿನ ಬೆಣ್ಣಿನಮನೆ ಗ್ರಾಮದ ಜಮೀನಿನಲ್ಲಿ ಹಲವು ವರ್ಷಗಳಿಂದ ಬಿದ್ದಿದ್ದ ಬೃಹತ್ ಗಾತ್ರದ ಕಲ್ಲಿನ ಆನೆಯನ್ನು 2 ಕ್ರೇನ್ ಹಾಗೂ 1 ಜೆಸಿಬಿ ಯಂತ್ರದ ಮೂಲಕ ಮೇಲಕ್ಕೆತ್ತಲಾಗಿದೆ. ಹೊಯ್ಸಳರ ಕಾಲದಲ್ಲಿ ಬೇಲೂರಿನ ಶ್ರೀ ಚನ್ನಕೆಶವಸ್ವಾಮಿ ದೇಗುಲ ನಿರ್ಮಾಣದ ಸಂದರ್ಭದ ಬೆಣ್ಣಿನಮನೆ ಗ್ರಾಮದಲ್ಲಿದ್ದ ಬೃಹತ್ ಗಾತ್ರದ ಬಂಡೆಕಲ್ಲಿನಿಂದ ಸಾಕಷ್ಟು ಕಲ್ಲಿನ ವಿಗ್ರಹಗಳನ್ನು ಕೆತ್ತಲಾಗಿದೆ ಎಂಬ ಉಹಾ ಪೋಹಗಳು ಹಿಂದಿನಿಂದಲೂ ಗ್ರಾಮಸ್ಥರನ್ನು ಕಾಡುತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಬೆಣ್ಣಿನಮನೆ ಗ್ರಾಮದಲ್ಲಿ 35 ರಿಂದ 40 ಟನ್ ತೂಕದಕಲ್ಲಿನ ಕಲ್ಲಿನ ಆನೆ […]