ಸಾರ್ವಜನಿಕರೇ, ತುರ್ತು ದೂರುಗಳಿದ್ದಲ್ಲಿ 112ಗೆ ಕರೆ ಮಾಡಿ

ಬೆಂಗಳೂರು, ಡಿ.21- ತುರ್ತು ದೂರುಗಳಿದ್ದಲ್ಲಿ ನಗರದ ನಾಗರಿಕರು ತಕ್ಷಣ 112ಗೆ ಕರೆ ಮಾಡಿ ದೂರು ನೀಡಿ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ವೈಟ್‍ಫೀಲ್ಡ್ ವಿಭಾಗದ ಪೊಲೀಸರು ವಶಪಡಿಸಿಕೊಂಡಿರುವ ಕಳವು ಮಾಲುಗಳ ಪ್ರದರ್ಶನವನ್ನು ಎಚ್‍ಎಎಲ್ ಪೊಲೀಸ್ ವಸತಿ ಗೃಹಗಳ ಮೈದಾನದಲ್ಲಿ ವೀಕ್ಷಿಸಿ, ವಾರಸುದಾರರಿಗೆ ಹಸ್ತಾಂತರಿಸಿ ನಂತರ ಮಾತನಾಡಿದರು.ದೂರುಗಳಿದ್ದಲ್ಲಿ ನೀವು ಕಚೇರಿ ಹಾಗೂ ಪೊಲೀಸ್ ಠಾಣೆಗಳಿಗೆ ಹೋಗಿ ಸಮಯ ವ್ಯರ್ಥ ಮಾಡುವ ಬದಲು ತಕ್ಷಣ 112ಗೆ ಕರೆ ಮಾಡಿದರೆ ದೂರು ದಾಖಲಾಗುತ್ತದೆ. […]