ಉದ್ಯೋಗಸ್ಥ ಮಹಿಳೆಯರು, ವೃದ್ಧರಿಗಾಗಿ ಬಿಬಿಎಂಪಿಯಿಂದ ವಸತಿ ಯೋಜನೆ

ಬೆಂಗಳೂರು,ಫೆ.23- ಮಾರ್ಚ್ ಮೊದಲ ವಾರದಲ್ಲಿ ಮಂಡನೆಯಾಗಲಿರುವ ಬಿಬಿಎಂಪಿ ಬಜೆಟ್ ಮೂಲಕ ಜನಮನ ಗೆಲ್ಲುವ ಉದ್ದೇಶದಿಂದ ಈ ಬಾರಿ ಎರಡು ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಉದ್ಯೋಗದಲ್ಲಿರುವ ಮಹಿಳೆಯರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸಾವಿತ್ರಿ ಬಾಯಿ ಪುಲೆ ಅವರ ಹೇಸರಿನ ಯೋಜನೆ ಹಾಗೂ ಆಶ್ರಯವಿಲ್ಲದ ಬೀದಿಯಲ್ಲಿರುವ ವೃದ್ಧರಿಗಾಗಿ ಶ್ರವಣ್‍ಕುಮಾರ್ ಹೆಸರಿನ ವಸತಿ ಯೋಜನೆ ಜಾರಿಯಾಗುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರದ ಬಜೆಟ್ ನಂತರ ಜನರಲ್ಲಿ ಆಸಕ್ತಿ ಹುಟ್ಟುಹಾಕುವ ಬಜೆಟ್ ಅಂದ್ರೆ ಅದು ಬಿಬಿಎಂಪಿ ಬಜೆಟï. ಸಾವಿರಾರು ಕೋಟಿ […]