ಒತ್ತುವರಿ ತೆರವಿನಲ್ಲಿ ತಾರತಮ್ಯ ಮಾಡಿಲ್ಲ : ತುಷಾರ್ ಗಿರಿನಾಥ್

ಬೆಂಗಳೂರು,ಅ.11- ನಗರದಲ್ಲಿ ನಡೆಸಲಾಗುತ್ತಿರುವ ಒತ್ತುವರಿಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಕೆಲವು ಕಡೆ ಒತ್ತುವರಿ ಮಾಡಲು ಸಾಧ್ಯವಾಗಿಲ್ಲ. ಉಳಿದಂತೆ ಎಲ್ಲ ಕಡೆ ನಾವು ಒತ್ತುವರಿ ತೆರವು ಕಾರ್ಯಚರಣೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು. ನಮಗೆ ಶ್ರೀಮಂತರು ಮತ್ತು ಬಡವರು ಅಂತ ಭೇದಭಾವ ಇಲ್ಲ. ಅಪಾರ್ಟ್ಮೆಂಟ್ಗಳ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರೈನ್ಬೋ ಅಪಾರ್ಟ್ […]