“ಓಮಿಕ್ರಾನ್‍ ಜೊತೆಯಲ್ಲಿ ಕೊರೊನಾ ಯುಗಾಂತ್ಯವಾಗಲಿದೆ”

ನವದೆಹಲಿ, ಜ.24- ಓಮಿಕ್ರಾನ್‍ ರೂಪಾಂತರಿ ಸೋಂಕಿನೊಂದಿಗೆ ಕೊರೊನಾ ಯುಗವೂ ಮುಗಿಯುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಗೆ ಹೇಳಿದ್ದಾರೆ. ಸುದ್ದಿಸಂಸ್ಥೆ ಫ್ರಾನ್ಸ್-ಪ್ರೆಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು,ಯೂರೋಪಿನಲ್ಲಿ ಮಾರ್ಚ್ ವೇಳೆಗೆ ಶೇ.60ರಷ್ಟು ಜನರಿಗೆ ಸೋಂಕು ಹರಡಲಿದೆ. ನಿಧಾನ ಗತಿಯಲ್ಲಿಲ ಸಾಂಕ್ರಾಮಿಕ ಸೋಂಕಿನ ಆಟ ಮುಗಿಯುತ್ತಿದೆ. ಬಹುಶಃ ಓಮಿಕ್ರಾನ್ ನಶಿಸಿದ ಜೊತೆಯಲ್ಲಿ ಕೊರೊನಾವೂ ಮುಕ್ತಾಯವಾಗಲಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಲಸಿಕೆಯಿಂದ ಹಲವು ತಿಂಗಳುಗಳವರೆಗೂ ಜಾಗತಿಕ ರೋಗನಿರೋಧಕ ಶಕ್ತಿ ಇರುತ್ತದೆ. ಸೋಂಕು ತಗುಲಿ […]