ಚಂದ್ರಯಾನ-3ರ ಮಿಷನ್‍ನಲ್ಲಿ ಇಸ್ರೋದ ಮತ್ತೊಂದು ಸಾಧನೆ

ಬೆಂಗಳೂರು,ಫೆ.28-ಚಂದ್ರಯಾನ-3 ಮಿಷನ್ ವಿಚಾರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಒಂದು ಹೆಜ್ಜೆ ಮುಂದಡಿಯಿಟ್ಟಿದೆ. ಚಂದ್ರಯಾನ-3 ಮಿಷನ್ ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತಕ್ಕೆ ಶಕ್ತಿ ತುಂಬುವ ಸಿಇ-20 ಕ್ರಯೋಜೆನಿಕ್ ರಾಕೇಟ್ ಎಂಜಿನ್‍ನ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಫೆ.24 ರಂದು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‍ನ ಹೈ ಆಲ್ಟಿಟ್ಯೂಡ್ ಟೆಸ್ಟ್ ಫೆಸಿಲಿಟಿಯಲ್ಲಿ ಯೋಜಿತ ಅವಧಿಗೆ 25 ಸೆಕೆಂಡುಗಳ ಕಾಲ ನಡೆದ ಪರೀಕ್ಷೆಯಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆಯ […]

ಬೆಂಗಳೂರಲ್ಲಿ ರಾಕೆಟ್ ಎಂಜಿನ್ ಉತ್ಪಾದನಾ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಬೆಂಗಳೂರು, ಸೆ. 27- ರಾಕೆಟ್ ಎಂಜಿನ್ ಅನ್ನು ಒಂದೇ ಸೂರಿನಡಿ ಸಂಪೂರ್ಣವಾಗಿ ಉತ್ಪಾದನೆ ಮಾಡುವ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಉತ್ಪಾದನಾ ಸೌಲಭ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರಿನಲ್ಲಿಂದು ಉದ್ಘಾಟಿಸಿದರು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಇಂಟಿಗ್ರೇಟೆಡ್ ಕ್ರಯೋಜೆನಿಕ್ ಎಂಜಿನ್ ಉತ್ಪಾದನಾ ಸೌಲಭ್ಯವನ್ನು (ಐಸಿಎಂಎಫ್) ಸ್ಥಾಪಿಸಿದೆ. ಸುಮಾರು 4,500 ಚದರ ಮೀಟರ್ ವಿಸ್ತೀರ್ಣದಲ್ಲಿ 70 ಕ್ಕೂ ಹೆಚ್ಚು ಹೈಟೆಕ್ ಉಪಕರಣಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ರಾಕೆಟ್‍ಗಳ ಕ್ರಯೋಜೆನಿಕ್ (ಸಿಇ20) ಮತ್ತು ಸೆಮಿ-ಕ್ರಯೋಜೆನಿಕ್ (ಎಸ್‍ಇ2000) ಎಂಜಿನ್‍ಗಳ […]