ಪೊಲೀಸರ ಸೋಗಿನಲ್ಲಿ ಮನೆ ದರೋಡೆ: ಆರೋಪಿಗಳ ಜಾಡು ಹಿಡಿದ ಪೊಲೀಸರು

ಬೆಂಗಳೂರು, ಜ.2- ಪೊಲೀಸರ ಸೋಗಿನಲ್ಲಿ ಇಂಜಿನಿಯರ್ ಮನೆಗೆ ಬಂದು 19 ಲಕ್ಷ ರೂ.ನಗದು ಅರ್ಧ ಕೆ.ಜಿ ಚಿನ್ನಾಭರಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಆರೋಪಿಗಳ ಸುಳಿವು ಮಹಾಲಕ್ಷ್ಮಿಲೇಔಟ್ ಪೊಲೀಸರಿಗೆ ದೊರೆತಿದೆ. ಪರಾರಿಯಾಗಿರುವ ದರೋಡೆ ಕೋರರ ಬಂಧನಕ್ಕಾಗಿ ರಚಿಸಲಾಗಿರುವ 3 ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ. ದರೋಡೆ ಪ್ರಕರಣ ದಾಖಲಾಗುತ್ತಿದ್ದಂತೆ ನಮ್ಮ ಪೊಲೀಸರು ತನಿಖೆ ಕೈಗೊಂಡು ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಆದಷ್ಟು ಬೇಗ ದರೋಡೆ ಕೋರರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ತಂಡ ನಗರದಲ್ಲೆ […]