ಭಾರತದ ಜೆಟ್ ಎಂಜಿನ್ ತಯಾರಿಕೆಗೆ ಅಮೆರಿಕ ಸಹಕಾರ

ನವದೆಹಲಿ,ಫೆ.1- ರಷ್ಯಾದಿಂದ ನವದೆಹಲಿಯನ್ನು ದೂರವಿಡುವಂತೆ ನೋಡಿಕೊಳ್ಳುವಲ್ಲಿ ಅಮೆರಿಕಾ ದಾಪುಗಾಲಿಡುತ್ತಿದೆ. ಜತೆಗೆ ದಕ್ಷಿಣ ಏಷ್ಯಾದ ಪ್ರಬಲ ರಾಷ್ಟ್ರವಾಗಿರುವ ಚೀನಾವನ್ನು ಎದುರಿಸುವ ಉದ್ದೇಶದಿಂದ ಭಾರತದೊಂದಿಗೆ ಜೆಟ್ ಎಂಜಿನ್‍ಗಳ ಜಂಟಿ ಉತ್ಪಾದನೆ ಸೇರಿದಂತೆ ಸುಧಾರಿತ ರಕ್ಷಣಾ ಮತ್ತು ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಹಂಚಿಕೊಳ್ಳಲು ತೀರ್ಮಾನಿಸಿದೆ. ಯುಎಸ್ -ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜೀಸ್ ಎಂದು ಕರೆಯಲ್ಪಡುವ ಯೋಜನೆಯಡಿ ಪಾಲುದಾರ ದೇಶಗಳೊಂದಿಗೆ ಮಿಲಿಟರಿ, ತಂತ್ರಜ್ಞಾನ ಮತ್ತು ಪೂರೈಕೆ-ಸರಪಳಿ ಲಿಂಕ್‍ಗಳನ್ನು ಬಲಪಡಿಸುವ ವಾಷಿಂಗ್‍ಟನ್‍ನ ವಿಶಾಲ ಕಾರ್ಯಸೂಚಿಯನ್ನು ಅಮೆರಿಕಾ ಬಿಡುಗಡೆ ಮಾಡಿದೆ. ಅಮೆರಿಕಾದ ರಾಷ್ಟ್ರೀಯ […]