ತೆಲಂಗಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆಗೆ ಅದ್ದೂರಿ ಸ್ವಾಗತ

ಬೆಂಗಳೂರು,ಅ.23- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜಸುಯಜ್ಞ ಕರ್ನಾಟಕ-ತೆಲಂಗಾಣದ ಗಡಿಯಲ್ಲಿ ಐಕ್ಯವಾಗಿದ್ದು, ಪಾದಯಾತ್ರೆ ಕನ್ನಡನಾಡಿನಿಂದ ತೆಲುಗು ನಾಡಿಗೆ ಕಾಲಿರಿಸಿದೆ ಎಂದು ವಿಶ್ಲೇಷಿಸಲಾಗಿದೆ. ತೆಲಂಗಾಣ ಕಾಂಗ್ರೆಸ್ ಟ್ವಿಟರ್‍ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ದೃಶ್ಯಾವಳಿಯಲ್ಲಿ ಜನಸಾಗರವೇ ಕಂಡುಬರುತ್ತಿದೆ. ನಿನ್ನೆ ಸಂಜೆ ರಾಯಚೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗವಹಿಸಿರುವ ವಿಡಿಯೋ ಭಾರೀ ವೈರಲ್ಲಾಗಿದ್ದವು. ಇಂದು ಬೆಳಗ್ಗೆ ರಾಯಚೂರಿನ ಯರಮಾವುನಿಂದ ತೆಲಂಗಾಣದ ಗುಡೇಬೆಳ್ಳೂರು ಗಡಿಯ ಕೃಷ್ಣಾ ನದಿಯ ತಟದಲ್ಲಿ ಯಾತ್ರೆ ಬೃಹತ್ ಸಮಾವೇಶಗೊಂಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಷ್ಟ್ರ ಧ್ವಜವನ್ನು […]