ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಭಾರತ ವಿರೋಧ

ವಿಶ್ವಸಂಸ್ಥೆ,ಡಿ.10- ನಿರ್ಬಂಧಗಳ ಹೊರತಾಗ ಮಾನವೀಯ ನೆರವು ನೀಡುವ ಪ್ರಯತ್ನಗಳನ್ನು ಪುಷ್ಟೀಕರಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯವನ್ನು ವಿರೋಧಿಸಿ ಭಾರತ ಮತದಾನದಲ್ಲಿ ತಟಸ್ಥವಾಗಿ ಉಳಿದಿದೆ.ಅಮೆರಿಕ ಮತ್ತು ಇಸ್ರೇಲ್ ದೇಶಗಳಿಂದ ಮಂಡನೆಯಾದ ನಿರ್ಣಯ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚರ್ಚಿಸಲಾಗಿದೆ. 15 ಸದಸ್ಯ ರಾಷ್ಟ್ರಗಳ 14 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಾರೆ. ಭಾರತ ತಟಸ್ಥವಾಗಿ ಉಳಿದಿದೆ.ಆದರೆ ಚರ್ಚೆಯಲ್ಲಿ ಭಾಗವಹಿಸಿದ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ರುಚಿರಕಾಂಬೋಜ್ ಅವರು ಮಾನವೀಯ ನೆರವನ್ನು ದುರುಪಯೋಗಪಡಿಸಿ ಕೊಂಡು ಉಗ್ರ ಸಂಘಟನೆಗಳು ಬಲಿಷ್ಠ ಗೊಳ್ಳುತ್ತವೆ […]