ಗೋಡೆ ಹಾರಿ ನೆರೆಮನೆಯಲ್ಲಿ ತಲೆಮರೆಸಿಕೊಂಡಿದ್ದ ಇಮ್ರಾನ್‍ ಖಾನ್

ಇಸ್ಲಾಮಾಬಾದ್,ಮಾ.7- ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಮನೆಯ ಗೋಡೆ ಹಾರಿ ನೆರೆಮನೆಗೆ ಪರಾರಿಯಾಗಿದ್ದರಿಂದ ಅವರನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ಹೇಳಿದ್ದಾರೆ. ಇಮ್ರಾನ್ ಖಾನ್ ಅವರನ್ನು ಬಂಧಿಸಲು ಇಸ್ಲಾಮಾಬಾದ್ ಪೊಲೀಸರು ಲಾಹೋರ್‍ಗೆ ಆಗಮಿಸಿದ್ದು, ಇಮ್ರಾನ್ ಖಾನ್ ತಲೆಮರೆಸಿಕೊಂಡಿರುವುದರಿಂದ ಅವರ ಬಂಧನ ನಿನ್ನೆ, ಖಾನ್ ಅವರನ್ನು ಬಂಧಿಸಲು ಹೋದ ತಂಡವು ಸಾಕಷ್ಟು ನಾಟಕವನ್ನು ಎದುರಿಸಿತು. ಖಾನ್ ತನ್ನ ನೆರೆಹೊರೆಯವರ ಮನೆಯಲ್ಲಿ ತಲೆಮರೆಸಿಕೊಂಡರು […]

ಪ್ರತ್ಯೇಕ ಅಪಘಾತ : ಐವರು ಪ್ರಾಣಾಪಯದಿಂದ ಪಾರು

ಕುಣಿಗಲ್, ಫೆ.8- ರಾಷ್ಟ್ರೀಯ ಹೆದ್ದಾರಿ-75ರ ಅಂಚೆಪಾಳ್ಯ ಬಳಿ ನಡೆದ ಎರಡು ಪ್ರತ್ಯೇಕ ಭೀಕರ ಅಪಘಾತದಲ್ಲಿ ಐವರು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ತಾಲೂಕಿನ ಹುತ್ರಿದುರ್ಗ ಗ್ರಾಮದ ಮನು ಎಂಬ ಯುವಕ ಕೆಲಸದ ನಿಮಿತ್ತ ಬೈಕ್‍ನಲ್ಲಿ ಅಂಚೆಪಾಳ್ಯಕ್ಕೆ ಬಂದು ಹೊಟೇಲ್ ಮುಂಭಾಗದ ರಸ್ತೆಬದಿಯಲ್ಲಿ ಬೈಕ್ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಎಡಬದಿಗೆ ವೇಗವಾಗಿ ನುಗ್ಗಿದ್ದು, ಇದನ್ನು ಗಮನಿಸಿದ ಮನು ಕ್ಷಣಾರ್ಧದಲ್ಲಿ […]

ಪತ್ನಿ ಕೊಂದು ವಿಮಾನದಲ್ಲಿ ಪರಾರಿಯಾಗಿದ್ದ ಖತರ್ನಾಕ್ ಪತಿ ಸೆರೆ

ಬೆಂಗಳೂರು,ಜ.22- ಪತ್ನಿಯನ್ನು ಕೊಂದು ವಿಮಾನದಲ್ಲಿ ದೆಹಲಿಗೆ ಪರಾರಿಯಾಗಿದ್ದವನನ್ನು ಸದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‍ವೇರ್ ಎಂಜಿನಿಯರ್ ನಾಝ್‍ಳನ್ನು ಪ್ರೀತಿಸಿ ವಿವಾಹವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ನಾಸಿರ್ ಹುಸೇನ್‍ನನ್ನು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ವಿವರ:ಅನಾಥನಾಗಿದ್ದ ನಾಸೀರ್ ಹುಸೇನ್ ಮತ್ತು ನಾಝ್ ಪರಸ್ಪರ ಪ್ರೀತಿಸಿ ಕಳೆದ ಆರು ತಿಂಗಳಷ್ಟೇ ವಿವಾಹವಾಗಿ ತಾವರೆಕೆರೆಯ ಸುಭಾಷ್ ನಗರದ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದ ನಾಝ್ ಮೇಲೆ ನಾಸಿರ್ ಅನುಮಾನ ವ್ಯಕ್ತಪಡಿಸಿದ್ದ. ಇದರಿಂದ ದಂಪತಿ […]

ಗುಂಡಿನ ದಾಳಿ ನಡೆಸಿ ಪರಾರಿಯಾದ ದುಷ್ಕರ್ಮಿಗಳಿಗಾಗಿ ವ್ಯಾಪಕ ಶೋಧ

ಬೆಂಗಳೂರು, ಡಿ.9- ಆಂಧ್ರಪ್ರದೇಶದ ಮದನಪಲ್ಲಿಯ ರೌಡಿ ಹಾಗೂ ಆತನ ಕಾರು ಚಾಲಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿರುವ ನಾಲ್ಕು ವಿಶೇಷ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಒಂದು ತಂಡ ಆಂಧ್ರ ಪ್ರದೇಶಕ್ಕೆ, ಮತ್ತೊಂದು ತಂಡ ತಮಿಳುನಾಡಿಗೆ ಹಾಗೂ ಇನ್ನೊಂದು ತಂಡ ತೆಲಂಗಾಣಕ್ಕೆ ಹೋಗಿದ್ದು, ಒಂದು ತಂಡ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದೆ. ಕೆಆರ್‍ಪುರ ಸಮೀಪದ ಕುರುಸೊನ್ನೆನಹಳ್ಳಿ ಬಳಿ ರೌಡಿ ಶಿವಶಂಕರ ರೆಡ್ಡಿ […]