ಉಡುಪಿ, ತುಮಕೂರಿನಲ್ಲಿ ESI ಆಸ್ಪತ್ರೆ ತೆರೆಯಲು ಕೇಂದ್ರ ಅಸ್ತು

ನವದೆಹಲಿ,ಜು.15- ಕರ್ನಾಟಕದ ಉಡುಪಿ ಮತ್ತು ತುಮಕೂರಿನಲ್ಲಿ 100 ಹಾಸಿಗೆ ಸಾಮಥ್ರ್ಯವುಳ್ಳ ಎರಡು ಇಎಸ್‍ಐ ಆಸ್ಪತ್ರೆಯನ್ನು ತೆರೆಯಲು ಕೇಂದ್ರ ಸರ್ಕಾರ ಇಂದು ತಾತ್ವಿಕ ಅನುಮೋದನೆ ನೀಡಿದೆ. ಉಡುಪಿ ಹಾಗೂ ತುಮಕೂರಿನಲ್ಲಿ ಸುಮಾರು ನೂರು ಹಾಸಿಗೆ ಸಾಮಥ್ರ್ಯ ಈ ಎರಡೂ ಆಸ್ಪತ್ರೆಗಳನ್ನು ಆರಂಭಿಸಲು ಅಗತ್ಯವಿರುವ ಜಮೀನುಗಳನ್ನು ಒದಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ತೆಗೆದಕೊಳ್ಳಬೇಕೆಂದು ಕೇಂದ್ರದ ಕಾರ್ಮಿಕ ಇಲಾಖೆ ಸೂಚನೆ ನೀಡಿದೆ. ದೇಶಾದ್ಯಂತ ಕಾರ್ಮಿಕ ಇಲಾಖೆ ವತಿಯಿಂದ 23 ಇಎಸ್‍ಐ ಆಸ್ಪತ್ರೆಗಳನ್ನು ತೆರೆಯಲು ಕಳೆದ ತಿಂಗಳು ಕೇಂದ್ರ ಸಚಿವ ಸಂಪುಟ […]