ಜೋಶಿಮಠ ತೆರವು ಕಾರ್ಯಚರಣೆ ಆರಂಭ

ನವದೆಹಲಿ,ಜ.10- ಉತ್ತರಾಖಂಡ್‍ನ ಜೋಶಿಮಠದಲ್ಲಿ ಬಿರುಕು ಬಿಟ್ಟಿರುವ ಮತ್ತು ತೀವ್ರವಾಗಿ ಹಾನಿಗೀಡಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಜೋಶಿಮಠವನ್ನು ಅಪಾಯ, ಬಫರ್ ಮತ್ತು ಸಂಪೂರ್ಣವಾಗಿ ಸುರಕ್ಷಿತ ಎಂಬ ಮೂರು ವಲಯಗಳನ್ನಾಗಿ ವಿಂಗಡಿಸಿ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೂ 678 ಕಟ್ಟಡಗಳು ಬಿರುಕು ಬಿಟ್ಟಿವೆ. ಅವುಗಳಲ್ಲಿ ಹೆಚ್ಚು ಹಾನಿಗೊಳಗಾಗಿರುವ ಕಟ್ಟಡಗಳು ಹಾಗೂ ವಾಲಿರುವ ಮೌಂಟ್ ವ್ಯೂ ಮತ್ತು ಮಲಾರಿ ಇನ್ ಹೋಟೆಲ್‍ಗಳನ್ನು ಸಂಪೂರ್ಣ ತೆರವುಗೊಳಿಸಲಾಗುತ್ತಿದೆ. ಸುಮಾರು 4,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ […]