ಉತ್ತರ ಕರ್ನಾಟಕದಲ್ಲಿ ಮೋದಿ ಅಬ್ಬರ

ಬೆಂಗಳೂರು,ಜ.12-ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಬೂಸ್ಟ್ ನೀಡಲಿದೆ ಎಂದೇ ಹೇಳಲಾಗಿದ್ದ ಹುಬ್ಬಳ್ಳಿ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಆಡಳಿತಾರೂಢ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿತು. ನವದೆಹಲಿಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರು, ವಿಮಾನ ನಿಲ್ದಾಣದಿಂದ ಸುಮಾರು ಆರು ಕಿ.ಮೀ. ರಸ್ತೆಯಲ್ಲಿ ತೆರೆದ ವಾಹನದ ಮೂಲಕ ಮೆರವಣಿಗೆ ನಡೆಸಿ ಯುವಜನತೆಯಲ್ಲಿ ಕಿಚ್ಚು ಹಚ್ಚಿಸಿದರು. ಮಧ್ಯಾಹ್ನ 3.30ರಿಂದ ವಿಮಾನ ನಿಲ್ದಾಣದ ಮೂಲಕ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಆದು ಬಂದಿತು. ಮೋದಿ […]

ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ದೂರು ದಾಖಲು

ಬೆಂಗಳೂರು,ಅ.16- ಸಾರ್ವಜನಿಕವಾಗಿ ಹಾವಿನ ಪ್ರದರ್ಶನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಧಾರ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ವಿರುದ್ಧ ದೂರು ದಾಖಲಾಗಿದೆ. ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಈ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿತ್ತು. ವನ್ಯಜೀವಿಗಳನ್ನು ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ಆಕ್ಷೇಪಿಸಿ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ […]

ಸಿದ್ದು ಸಿದ್ದರಾಮೋತ್ಸವಕ್ಕೆ ಠಕ್ಕರ್ ಕೊಡಲು ಪರ್ಯಾಯ ಉತ್ಸವಕ್ಕೆ ಬಿಜೆಪಿ ಸಜ್ಜು

ಬೆಂಗಳೂರು,ಆ.5- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ದಿನೋತ್ಸವ ಭರ್ಜರಿ ಯಶಸ್ವಿಯಾದ ಬೆನ್ನಲ್ಲೇ ಬಿಜೆಪಿ ಕೂಡ ಪರ್ಯಾಯವಾಗಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದೆ. ಹುಬ್ಬಳ್ಳಿ, ಮಂಗಳೂರು ಇಲ್ಲವೇ ಮೈಸೂರು ಕರ್ನಾಟಕ ಭಾಗದಲ್ಲಿ ಭರ್ಜರಿ ಕಾರ್ಯಕರ್ತರ ಸಮಾವೇಶ ನಡೆಸಬೇಕೆಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿಬಂದಿದೆ. ಗುರುವಾರ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಸಮಾವೇಶ ನಡೆಸಲು ಒಪ್ಪಿಗೆ ಸೂಚಿಸಿದ್ದು, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಲು ಸಮಾವೇಶದ ಅಗತ್ಯತೆಯನ್ನು ಪಕ್ಷದ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದಾರೆ. ದಕ್ಷಿಣ ಕನ್ನಡ […]

ಚೆಸ್ ಒಲಂಪಿಯಾಡ್ ಪ್ರಚಾರದ ಹೋರ್ಡಿಂಗ್‍ಗಳಲ್ಲಿ ಪ್ರಧಾನಿ ಫೋಟೋ ನಾಪತ್ತೆ: ಬಿಜೆಪಿ ಆಕ್ರೋಶ

ಚೆನೈ, ಜು.27- ತಮಿಳುನಾಡು ಸರ್ಕಾರದಿಂದ ಆಯೋಜಿಸಿರುವ 44 ಚೆಸ್ ಒಲಿಂಪಿಯಾಡ್ ಸ್ಪರ್ಧೆಯ ಪ್ರಚಾರದ ಹೋರ್ಡಿಂಗ್‍ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಕೆ ಮಾಡಿದಿರುವ ಕುರಿತು ರಾಜ್ಯ ಬಿಜೆಪಿ ಕಿಡಿಕಾರಿದೆ. ಬಿಜೆಪಿಯ ಕ್ರೀಡೆ, ಕೌಶಲ್ಯಾಭಿವೃದ್ಧಿ ಕೋಶದ ಅಧ್ಯಕ್ಷ ಅಮರ್ ಪ್ರದ್ದ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಚೆನೈನಾದ್ಯಂತ ಬಸ್ ನಿಲ್ದಾಣ ಹಾಗೂ ಇತರ ಕಡೆ ಹಾಕಲಾಗಿರುವ ಹೋರ್ಡಿಂಗ್‍ಗಳಲ್ಲಿ ಪ್ರಧಾನಿ ಅವರ ಭಾವಚಿತ್ರವನ್ನು ಅಂಟಿಸಿದ್ದಾರೆ. ಈ ಕುರಿತು ಟ್ವಿಟರ್‍ನಲ್ಲಿ ನಿನ್ನೆ ವಿಡಿಯೋ ಹಂಚಿಕೊಂಡಿರುವ ಪ್ರಸಾದ್ ರೆಡ್ಡಿ, ಡಿಎಂಕೆ ಆಡಳಿತದಲ್ಲಿ ಪ್ರಧಾನಿ ಮೋದಿ […]