ಅಗ್ನಿವೀರರಿಗೆ ಬಿಎಸ್‍ಎಫ್‍ನಲ್ಲೂ ಶೇ.10ರಷ್ಟು ಮೀಸಲಾತಿ

ನವದೆಹಲಿ,ಮಾ.10- ಅಗ್ನಿಪತ್ ಯೋಜನೆಯಡಿ ಸೇನೆಗೆ ನೇಮಕಗೊಂಡು ನಾಲ್ಕು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಗ್ನಿವೀರರಿಗೆ ಬಿಎಸ್‍ಎಫ್ ನೇಮಕಾತಿಯಲ್ಲಿ ಶೇ.10ರಷ್ಟು ಮೀಸಲಾತಿ ನೀಡುವುದು ಮತ್ತು ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಸೂಚನೆಯ ಪ್ರಕಾರ ಅರೆಸೇನಾಪಡೆಗಳಲ್ಲಿ ಅಗ್ನಿವೀರರಿಗೆ ಶೇ.10ಮೀಸಲಾತಿ ನೀಡಲಾಗುತ್ತಿದೆ. ದೈಹಿಕ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ನೇಮಕಾತಿಗೆ ಕನಿಷ್ಠ 18ರಿಂದ ಗರಿಷ್ಠ 23 ವರ್ಷ ಮಿತಿಯನ್ನು ನಿಗದಿ ಮಾಡಲಾಗಿದೆ. 17ರಿಂದ 22 […]