ಬೂಮ್ರಾ ಒಳ್ಳೆ ಬೌಲರ್ ಅಲ್ವಂತೆ..!

ನವದೆಹಲಿ,ಜ.30- ಭಾರತೀಯ ಕ್ರಿಕೆಟಿಗರನ್ನು ಹಿಯಾಳಿಸುವ ತಮ್ಮ ಹಳೆ ಕ್ಯಾತೆಯನ್ನು ಪಾಕ್ ಕ್ರಿಕೆಟಿಗರು ಮತ್ತೆ ಮುಂದುವರೆಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಅದ್ಭುತ ಬೌಲರ್ ಜಸ್‍ಪ್ರಿತ್ ಬೂಮ್ರಾ ಅವರನ್ನು ಹಿಯಾಳಿಸಿರುವ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಬ್ದುಲ್ ರಜಾಕ್ ಅವರು ಶಾಹಿನ್ ಆಫ್ರೀದಿ ಅವರನ್ನು ಹಾಡಿ ಹೊಗಳಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಬೌಲರ್ ಬೂಮ್ರಾ ಅವರು ಶಾಹಿನ್ ಆಫ್ರಿದಿಗೆ ಸರಿಸಾಟಿಯಲ್ಲ. ಅವರು ಭವಿಷ್ಯದಲ್ಲಿ ಅಫ್ರಿದಿ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ ಎನ್ನುವ ಮೂಲಕ ತಮ್ಮ ಭಾರತ ವಿರೋಧಿ ಧೋರಣೆಯನ್ನು ಬಹಿರಂಗಪಡಿಸಿದ್ದಾರೆ. […]