BIG NEWS : ಪೆಗಾಸಸ್ ಬೇಹುಗಾರಿಕೆ ಪ್ರಕರಣದ ತನಿಖಾ ವರದಿ ಸುಪ್ರೀಂಗೆ ಸಲ್ಲಿಕೆ

ನವದೆಹಲಿ,ಆ.25- ಕಳೆದ ವರ್ಷ ಭಾರೀ ಸಂಚಲನ ಮೂಡಿಸಿದ್ದ ಪೆಗಾಸಸ್(ಬೇಹುಗಾರಿಕೆ) ಪ್ರಕರಣದ ತನಿಖೆ ನಡೆಸಿದ ನ್ಯಾಯಮೂರ್ತಿ ರವೀಂದ್ರನ್ ಅವರ ಸಮಿತಿ, ಸುಪ್ರೀಂಕೋರ್ಟ್‍ಗೆ ವರದಿ ನೀಡಿದ್ದು, ಐದು ಫೋನ್‍ಗಳಲ್ಲಿ ಸಂಶಯಾಸ್ಪದ ಗೂಡಾಚಾರಿಕೆ ನಡೆದಿರುವುದು ಕಂಡುಬಂದಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರ ಇಸ್ರೇಲ್ ಮೂಲದ ಕಂಪೆನಿಯಿಂದ ಸೇನಾ ಗೂಡಾಚಾರಿಕೆಗೆ ಬಳಸುವ ಪೆಗಾಸಸ್ ಸಾಫ್ಟ್‍ವೇರ್‍ನನ್ನು ಖರೀದಿಸಿ ಅದನ್ನು ಪ್ರತಿ ಪಕ್ಷಗಳ ನಾಯಕರು, ನ್ಯಾಯಾಂಗದ ಅಧಿಕಾರಿಗಳು, ವಕೀಲರು, ಸಮಾಜಿಕ ಕಾರ್ಯಕರ್ತರು, ಪತ್ರಕರ್ತರು ಸೇರಿದಂತೆ ಇತರೆ ಪ್ರಮುಖರ ಮೇಲೆ ಬೇಹುಗಾರಿಕೆಗೆ ಬಳಕೆ ಮಾಡಿತ್ತು ಎಂಬ ಆರೋಪಗಳು […]