ರಾಜ್ಯಪಾಲರ ನಿರ್ಗಮನವನ್ನು ಸ್ವಾಗತಿಸಿ ಮಹಾರಾಷ್ಟ್ರ ನಾಯಕರು

ಮುಂಬೈ,ಫೆ.12- ರಾಜ್ಯಪಾಲರ ಸ್ಥಾನಕ್ಕೆ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಮುಖ್ಯಸ್ಥ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮೊದಲಿನ ರಾಜ್ಯಪಾಲ ಕೊಶ್ಯಾರಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ರಾಜ್ಯಪಾಲರನ್ನಾಗಿ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್‍ರನ್ನು ನೇಮಕ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಹಿಂದಿನವರಂತೆ ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ಭಾವಿಸುತ್ತೇನೆ. ಮಹಾ ವಿಕಾಸ್ ಅಘಾಡಿಯ […]

ಕಾಂಗ್ರೆಸ್ ತೊರೆದ ಆಜಾದ್, ರಾಹುಲ್ ಅಪ್ರಬುದ್ಧತೆ ವಿರುದ್ಧ ಟೀಕೆ

ನವದೆಹಲಿ,ಆ.26- ಕಾಂಗ್ರೆಸ್‍ನ ಪ್ರಭಾವಿ ನಾಯಕರೊಲ್ಲಬರಾದ ಗುಲಾಂನಬಿ ಆಜಾದ್ ಇಂದು ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದು, ಕೈ ಪಡೆಗೆ ಆಘಾತ ಮೂಡಿಸಿದೆ. ಜಮ್ಮುಕಾಶ್ಮೀರ ಮೂಲದ ಗುಲಾಂ ನಬಿ ಆಜಾದ್ ಪಕ್ಷದ ಮುಂಚೂಣಿ ನಾಯಕರಲ್ಲಿ ಮೊದಲಿಗರಾಗಿದ್ದರು. ರಾಜೀವ್ ಗಾಂಧಿ ಅವರ ನಂತರ ಪಕ್ಷದಲ್ಲಿ ಗುಲಾಂ ನಬಿ ಆಜಾದ್ ಅವರ ಮಾತಿಗೆ ಹೆಚ್ಚಿನ ಮನ್ನಣೆ ಇತ್ತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಜಾದ್ ಅವರಿಗೆ ಅಳತೆ ಮೀರಿ ಅವಕಾಶಗಳನ್ನು ನೀಡಿದ್ದರು ಎಂಬ ಆಕ್ಷೇಪಗಳು ಇದ್ದವು. ರಾಜ್ಯಸಭೆಯ ಪ್ರತಿಪಕ್ಷದ ನಾಯಕನ […]