“9 ಮತ್ತು 10ನೇ ತರಗತಿಗೂ ಆರ್‌ಟಿಇ ವಿಸ್ತರಿಸಿ” : ರುಪ್ಸಾ ಮನವಿ

ಬೆಂಗಳೂರು,ಫೆ.26- ಆರ್‌ಟಿಇ ಕಾಯ್ದೆಯನ್ನು 9 ಮತ್ತು 10ನೇ ತರಗತಿಗಳಿಗೂ ವಿಸ್ತರಿಸುವಂತೆ ರುಪ್ಸಾ ಮನವಿ ಮಾಡಿಕೊಂಡಿದೆ. ಕಳೆದ 2009ರಿಂದ ಜಾರಿಗೆ ಬಂದಿರುವ ಆರ್‌ಟಿಇ ವ್ಯವಸ್ಥೆ ಕೇವಲ ಒಂದರಿಂದ ಎಂಟನೇ ತರಗತಿಗಳಿಗೆ ಮಾತ್ರ ಅನ್ವಯವಾಗುತ್ತಿದೆ. ಆದರೆ, ಒಂಬತ್ತು ಮತ್ತು ಹತ್ತನೆ ತರಗತಿ ವ್ಯಾಸಂಗ ಮಾಡಬೇಕಾದರೆ ಶುಲ್ಕ ಪಾವತಿಸಬೇಕಿದೆ ಈ ಅನ್ಯಾಯವನ್ನು ಸರಿಪಡಿಸಿ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 9 ಮತ್ತು 10 ನೇ ತರಗತಿಗಳಿಗೆ ಆರ್‌ಟಿಇ ಅನ್ವಯವಾಗದ ಹಿನ್ನಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ವರ್ಗಾವಣೆ ಪತ್ರ […]