ಹೈದ್ರಾಬಾದ್ ತಜ್ಞರ ಭೇಟಿ, ಮೆಟ್ರೋ ದುರಂತ ಮುಚ್ಚಿಹಾಕಲು ನಡೆದಿದೆಯಾ ಯತ್ನ..?

ಬೆಂಗಳೂರು,ಜ.13- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬೀದ್ದಿರುವುದನ್ನು ಪತ್ತೆ ಹಚ್ಚಲು ಇಂದು ನಗರಕ್ಕೆ ಹೈದ್ರಾಬಾದ್ ಮೂಲದ ಐಐಟಿ ತಜ್ಞರು ಆಗಮಿಸಿದ್ದಾರೆ. ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ್ದರು. ಈ ಘಟನೆಗೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆಯೇ ಕಾರಣ ಎಂದು ಆರೋಪಿಸಲಾಗಿತ್ತು. ಹೀಗಾಗಿ ಸತ್ಯಾಸತ್ಯತೆ ಪರಿಶೀಲನೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಹೆಗಲಿಗೆ ವಹಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಐಐಎಸ್‍ಸಿ ವಿಜ್ಞಾನಿ ಚಂದ್ರ ಕೀಶನ್ ಅವರು ಮೇಲ್ನೋಟಕ್ಕೆ ಕಾಮಗಾರಿ ನಿರ್ವಹಿಸುವ […]

ಗಡಿವಿವಾದ : ಕಾನೂನು ತಜ್ಞರ ಜತೆ ಸಿಎಂ ಸಭೆ

ಬೆಂಗಳೂರು,ನ.27- ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಉಂಟಾಗಿರುವ ಗಡಿ ವಿವಾದವನ್ನು ಸುಪ್ರೀಂಕೋರ್ಟ್‍ನಲ್ಲಿ ಸಮರ್ಪಕವಾಗಿ ಕಾನೂನು ಹೋರಾಟ ನಡೆಸುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಜೆ ಕಾನೂನು ತಜ್ಞರ ಸಭೆ ಕರೆದಿದ್ದಾರೆ. ಸಂಜೆ 7 ಗಂಟೆಗೆ ರೇಸ್‍ಕೋರ್ಸ್ ರಸ್ತೆಯ ನಿವಾಸದಲ್ಲಿ ನಡೆಯಲಿರುವ ಸಭೆಗೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ್ ವಿ.ಪಾಟೀಲ್ ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸುವ ಸುಪ್ರೀಂಕೋರ್ಟ್ ವಕೀಲರು ಕೂಡ ಭಾಗಿಯಾಗಲಿದ್ದಾರೆ. ಗಡಿಯಲ್ಲಿರುವ ಕನ್ನಡ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ […]