ಹಾಸನದಲ್ಲಿ ಮಿಕ್ಸಿ ಸ್ಫೋಟ ಪ್ರಕರಣ, ಆರೋಪಿ ಅರೆಸ್ಟ್

ಹಾಸನ, ಜ.3-ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದ ಕೋರಿಯರ್ ಕಚೇರಿಯಲ್ಲಿ ಸಂಭವಿಸಿದ ಮಿಕ್ಸ್ ಸ್ಫೋಟ ಪ್ರಕರಣ ಸಂಬಂಧ ಆರೋಪಿ ಅನೂಪ್ ಕುಮಾರ್(42)ನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಆರೋಪಿ ಅನೂಪ್‍ಕುಮಾರ್ ಬಗ್ಗೆ ವಸಂತಾ ಅವರು ನೀಡಿದ ಹೇಳಿಕೆ ಮೇರೆಗೆ ತನಿಖೆ ಕೈಗೊಂಡು ಇದೀಗ ಅನೂಪ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜನವರಿ 7ರವರೆಗೆ ಪ್ರಕರಣ ಕುರಿತು ತನಿಖೆಗಾಗಿ ಪೊಲೀಸ್‍ರ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು. ಇಂದಿನಿಂದ ಮತ್ತೆ ಆರಂಭವಾದ ಭಾರತ್ […]

ಜಮ್ಮು-ಕಾಶ್ಮೀರ ಪಂಡಿತರ ಕಾಲೋನಿಯಲ್ಲಿ ಶೆಲ್ ಸ್ಫೋಟ

ಶ್ರೀನಗರ, ಆ.7- ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿಂದು ಪಂಡಿತರ ಕಾಲೋನಿಯಲ್ಲಿ ಉಗ್ರರು ಶೆಲ್ ಸ್ಫೋಟಗೊಳಿಸಿದ್ದಾರೆ.ಜಮ್ಮು-ಕಾಶ್ಮೀರದಲ್ಲಿ ಪಂಡಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅವರು ವಾಸಿಸುವ ಶ್ರೀನಗರದ ಕ್ರಲ್‍ಪೋರಾ ಕಾಲೋನಿಯಲ್ಲಿ ಉಗ್ರರು ಶೆಲ್ ಸ್ಫೋಟಗೊಳಿಸಿದ್ದು, ಇದು ಬೆದರಿಸುವ ಸಂಚೋ ಅಥವಾ ಹತ್ಯೆ ಮಾಡುವ ಸಂಚೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಕೆಲವು ಮನೆಯ ಕಿಟಕಿ, ಗಾಜುಗಳು ಒಡೆದುಹೋಗಿವೆ. ಮಧ್ಯ ಕಾಶ್ಮೀರದ ಚದುರದ ಕಲ್ಪೋರಾ ಕಾಲೋನಿಯಲ್ಲಿ ಪಂಡಿತರ ಕುಟುಂಬಗಳು ವಾಸಿಸುತ್ತಿದ್ದು, ನಿನ್ನೆ ಬೆಳಗ್ಗೆ 7.45ರ ಸುಮಾರಿಗೆ ಸ್ಫೋಟ […]