ಮುಂಬೈನಲ್ಲಿ 2 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

ಮುಂಬೈ, ಫೆ.10- ಇಂದು ನಗರಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಛತ್ರಪತಿ ಶಿವಾಜಿ ಟರ್ಮಿನಸ್‍ನಲ್ಲಿ ಎರಡು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದಾವೋಡಿ ಬೋಹ್ರಾ ಸಮುದಾಯದ ಕಾಲೇಜಿನ ನೂತನ ಕಟ್ಟಡ, ಎರಡು ರಸ್ತೆ ಕಾರಿಡಾರ್‍ಗಳು ಮತ್ತು ವಾಹನಗಳ ಅಂಡರ್ ಪಾಸನ್ನು ಉದ್ಘಾಟಿಸಿದ್ದಾರೆ. ಮಧ್ಯಾಹ್ನದ ವೇಳೆ ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು, ಮೊದಲು ಸಿಎಸ್‍ಎಮ್‍ಟಿ – ಸೋಲಪುರ ರೈಲಿಗೆ ಚಾಲನೆ ನೀಡಿ ಬಳಿಕ ಶಿರಡಿ ಸಾಯಿನಗರವನ್ನು ಸಂಪರ್ಕಿಸುವ ರೈಲಿಗೆ ಚಾಲನೆ ನೀಡಿದರು. ಸಿಎಸ್‍ಎಮ್‍ಟಿ – […]
ವಿಮಾನದಲ್ಲಿ ದೋಷ, 13 ಗಂಟೆ ನಿಲ್ದಾಣದಲ್ಲೇ ಕಾಲ ಕಳೆದ 170 ಪ್ರಯಾಣಿಕರು

ಮುಂಬೈ,ಫೆ.10- ನಿನ್ನೆ ಮದ್ಯಾಹ್ನ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದ ತಾಂತ್ರಿಕ ದೋಷದಿಂದ ಇಂದು ಬೆಳಿಗ್ಗೆ 4 ಗಂಟೆಗೆ ಹೊರಟ್ಟಿದ್ದರಿಂದ 170 ಪ್ರಯಾಣಿಕರು 13 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಗಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ನಿನ್ನೆ ಮದ್ಯಾಹ್ನ 3 ಗಂಟೆಗೆ ದುಬೈಗೆ ಟೇಕಾಫ್ ಆಗಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಇಂತಹ ಘಟನೆ ನಡೆದಿದೆ. ವಿಮಾನ ಹಾರಾಟ ವಿಳಂಬದಿಂದ 170 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು. ಲಾಂಜ್ ಸೌಲಭ್ಯ ಸೇರಿದಂತೆ ವಿಶೇಷ […]
ಎಂಜಿನ್‍ನಲ್ಲಿ ಬೆಂಕಿ : ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಅಬುದಾಬಿ, ಫೆ.3- ಏರ್ ಇಂಡಿಯಾ ವಿಮಾನದ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿದೆ. ಅಬುದಾಬಿಯಿಂದ ಕ್ಯಾಲಿಕಟ್‍ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ವಿಮಾನವು ನಿಲ್ದಾಣಕ್ಕೆ ಹಿಂದಿರುಗಿದೆ. ಯಾವುದೇ ಅಪಾಯ ಪ್ರಕರಣಗಳು ಜರುಗಿಲ್ಲದ ಕಾರಣ ಆತಂಕ ದೂರವಾಗಿದೆ. ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಬುದಾಬಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಹೇಳಿದೆ. ಖ್ಯಾತ […]
ರಾಜಸ್ಥಾನದ ಪಾಲಿಯಲ್ಲಿ ಹಳಿತಪ್ಪಿದ ಸೂರ್ಯನಾಗ್ರಿ ಎಕ್ಸ್ ಪ್ರೆಸ್ ರೈಲು

ಜೈಪುರ, ಜ. 2- ಇಂದು ಮುಂಜಾನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಸೂರ್ಯನಾಗ್ರಿ ಎಕ್ಸ್‍ಪ್ರೆಸ್‍ನ ರೈಲಿನ 11 ಬೋಗಿಗಳು ಹಳಿತಪ್ಪಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಾಂದ್ರಾ ಟರ್ಮಿನಸ್-ಜೋಧ್‍ಪುರ ಯಾವುದೇ ಮಧ್ಯ ಸುಮಾರು 3.30 ರ ಸಂದರ್ಭದಲ್ಲಿ ಬೋಗಿಗಳು ಹಳಿತಪ್ಪಿದೆ ಎಂದು ವಾಯುವ್ಯ ರೈಲ್ವೆ ವಕ್ತಾರರು ತಿಳಿಸಿ ದ್ದಾರೆ ರಾಜ್ಕಿಯಾವಾಸ್-ಬಮೋದರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈ ರೈಲಿನ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ ಬೋಗಿಗಳು ಹಳಿ ಪಕ್ಕದಲ್ಲೇ ಇದ್ದು ಇದರಿಂದಾಗಿ ಈ ಭಾಗದಲ್ಲಿ ಸಂಚರಿಸಬೇಕಿದ್ದ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ […]
ವಂದೇ ಭಾರತ್ ರೈಲಿಗೆ ಮತ್ತೆ ದನ ಡಿಕ್ಕಿ, 20 ನಿಮಿಷ ಪ್ರಯಾಣ ವಿಳಂಬ

ಮುಂಬೈ, ಅ.29- ಗುಜರಾತ್‍ನ ಗಾಂಧಿನಗರ ಹಾಗೂ ಮಹರಾಷ್ಟ್ರದ ಮುಂಬೈ ನಡುವೆ ಸಂಚರಿಸುವ ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್‍ಪೆಕ್ಸ್ ರೈಲಿಗೆ ಮೂರನೇ ಬಾರಿಗೆ ದನವೊಂದು ಡಿಕ್ಕಿ ಹೊಡೆದಿದ್ದು, ಸಂಚಾರ 20 ನಿಮಿಷಗಳ ಕಾಲ ಪ್ರಯಾಣ ವಿಳಂಬವಾಗಿದೆ. ಶನಿವಾರ ಬೆಳಗ್ಗೆ 8.20ರ ಸುಮಾರಿಗೆ ಅತುಲ್ ರೈಲ್ವೆ ನಿಲ್ದಾಣದ ಬಳಿ ದನವೊಂದು ಡಿಕ್ಕಿ ಹೊಡೆದಿದೆ. ಇದರಿಂದ ರೈಲಿನ ಮುಂಬಾಗ ಮತ್ತೆ ಹಾನಿಗೆ ಒಳಗಾಗಿದೆ. ಸೆಪ್ಟಂಬರ್ 30ರಂದು ಗುಜರಾತ್‍ನ ಗಾಂಧಿ ನಗರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಮಾರ್ಗದ ವಂದೇ […]
ಉದ್ದೇಶಪೂರ್ವಕವಾಗಿಯೇ ರೈಲಿನ ಹೆಸರು ಬದಲಾವಣೆ: ಪ್ರತಾಪ್‍ಸಿಂಹ
ಮೈಸೂರು, ಅ.12- ರೈಲಿಗೆ ಟಿಪ್ಪು ಹೆಸರನ್ನು ಉದ್ದೇಶಪೂರ್ವಕವಾಗಿಯೇ ಬದಲಾಯಿಸಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು. ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೈಲ್ವೆ ಇತಿಹಾಸದಲ್ಲೇ ರೈಲಿಗೆ ಹೆಸರಿಡುವ ಸಂಪ್ರದಾಯ ನಡೆದು ಬಂದಿದೆ. ಆದರೆ ಇಟ್ಟ ಹೆಸರನ್ನು ಬದಲಿಸಿರುವುದು ಇದೇ ಮೊದಲು ಎಂದರು. ಮೈಸೂರಿಗೆ ಟಿಪ್ಪು ಕೊಡುಗೆ ಏನೇನೂ ಇಲ್ಲ, ಹಾಗಾಗಿ ರೈಲಿಗೆ ಟಿಪ್ಪು ಹೆಸರು ಬದಲಾಯಿಸಿ ಒಡೆಯರ ಹೆಸರನ್ನು ಇಡಲಾಗಿದೆ. ಒಡೆಯರ ಅವರ ಕೊಡುಗೆ ನೂರಾರು ಇದೆ. ಟಿಪ್ಪು ಕೊಡುಗೆ ಏನಿದೆ ವಿವರಿಸಲಿ ಎಂದು […]
ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಮರುನಾಮಕರಣಕ್ಕೆ ವಾಟಾಳ್ ಆಕ್ರೋಶ

ಬೆಂಗಳೂರು,ಅ.8- ಟಿಪ್ಪು ಎಕ್ಸ್‍ಪ್ರೆಸ್ ಹೆಸರು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ. ಟಿಪ್ಪು ಎಕ್ಸ್‍ಪ್ರೆಸ್ ಹೆಸರು ಬದಲಾಯಿಸಿದ್ದು ಸರಿಯಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿರುವ ಟಿಪ್ಪು ಹೆಸರನ್ನು ಕೈ ಬಿಟ್ಟಿರುವುದು ಕೇಂದ್ರ ಸರ್ಕಾರದ ಸಣ್ಣತನಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟು ದೇಶಪ್ರೇಮ ಮೆರೆದಿದ್ದ ಟಿಪ್ಪು ಅವರ ಹೆಸರಿನಲ್ಲಿ ಇದುವರೆಗೂ ಓಡಾಡುತ್ತಿದ್ದ ಟಿಪ್ಪು ಎಕ್ಸ್‍ಪ್ರೆಸ್ ರೈಲಿಗೆ ಇದೀಗ […]