ಭೂಮಿ ನೀಡಿಕೆಯಲ್ಲಿ ಅವ್ಯವಹಾರ ಕುರಿತು ಪರಿಷತ್ನಲ್ಲಿ ವ್ಯಾಪಕ ಚರ್ಚೆ

ಬೆಂಗಳೂರು, ಫೆ.14- ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಭೂಮಿ ನೀಡಿಕೆಯಲ್ಲಿ ಅವ್ಯವಹಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಮಾಡಿದ ಆರೋಪ ಕಲಾಪದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ವಿಧಾನ ಪರಿಷತ್ನಲ್ಲಿ ಮರಿತಿಬ್ಬೇಗೌಡ, ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಬಡವರಿಗೆ ಮನೆ ಕಟ್ಟಿಕೊಡಲು ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲಿ ಬ್ರಿಗೆಡ್ ರಿಯಲ್ ಎಸ್ಟೇಟ್ ಸಂಸ್ಥೆಗೆ ಎರಡು ಹಂತದಲ್ಲಿ ಹತ್ತಾರು ಎಕರೆಯನ್ನು ಕೆಐಎಡಿಬಿಯಿಂದ ನೀಡಲಾಗಿದೆ. ಆದರಲ್ಲಿ ಬಡವರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಲಾಗಿತ್ತು. ಆದರೆ ಆ ನಿಯಮ ಪಾಲನೆಯಾಗಿಲ್ಲ. ಬ್ರಿಗೆಡ್ ಸಂಸ್ಥೆಗೆ […]