ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯುವುದು ಮುಖ್ಯ : ಸಿಎಂ

ಬೆಂಗಳೂರು ಮಾ.9- ನವಕರ್ನಾಟಕ ದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಮೊದಲ ವ್ಯಕ್ತಿಗೆ ಸಿಗುವ ಸ್ಥಾನಮಾನ, ಗೌರವ, ಅವಕಾಶ ದೊರಕುವುದು ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ಆಯೋಜಿಸಿದ್ದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಮತ್ತು ಕರ್ನಾಟಕ ಹಲವಾರು ಆರ್ಥಿಕ ಸ್ತರಗಳಲ್ಲಿರುವ ಜನ ಮತ್ತು ಜನಾಂಗಗಳಿಂದ ಕೂಡಿರುವ ದೇಶ. ಸ್ವತಂತ್ರಪೂರ್ವದಿಂದಲೂ, ಮಾನಸಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ತುಳಿತಕ್ಕೊಳಪಟ್ಟ ಹಲವಾರು ಸಮಾಜಗಳಿವೆ ಭಾರತ […]