ನಕಲಿ ಬಿಲ್‍ಗಳ ಹಾವಳಿ: ನೀರಾವರಿ ನಿಗಮಗಳಲ್ಲಿ ವಿಶೇಷ ಆಡಿಟ್‍ಗೆ ಆದೇಶ..

ಬೆಂಗಳೂರು,ಜ.4- ನೀರಾವರಿ ನಿಗಮಗಳಲ್ಲಿ ನಕಲಿ ಬಿಲ್ ಸೃಷ್ಟಿಸಿ ಅಕಾರಿಗಳು, ಗುತ್ತಿಗೆದಾರರು ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಲಸಂಪನ್ಮೂಲ ಇಲಾಖೆ ನೀರಾವರಿ ನಿಗಮಗಳಲ್ಲಿನ ಹಣಕಾಸು ವಹಿವಾಟುಗಳನ್ನು ವಿಶೇಷ ಆಡಿಟ್‍ಗೊಳಪಡಿಸಲು ನಿರ್ಧರಿಸಿದೆ. ಜಲಸಂಪನ್ಮೂಲ ಇಲಾಖೆಗೆ ಪ್ರತಿ ಬಜೆಟ್‍ನಲ್ಲಿ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ವಿವಿಧ ನೀರಾವರಿ ನಿಗಮಗಳಾದ ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳು ಸೇರಿದಂತೆ ಹಲವೆಡೆ ಸಾವಿರಾರು ಕಾಮಗಾರಿಗಳು ನಡೆಯುತ್ತಿರುತ್ತವೆ. ಈ ನಿಗಮಗಳಿಗೆ […]