ಶಿರಾಡಿ ಘಾಟ್‍ನಲ್ಲಿ ಗೋಡಂಬಿ ಖರೀದಿಸುವ ಮುನ್ನ ಹುಷಾರ್..!

ಚಿಕ್ಕಮಗಳೂರು, ಜ.7- ಗ್ರಾಮ ಪಂಚಾಯತ್, ಅರಣ್ಯ ಇಲಾಖೆ, ಪೊಲೀಸ್, ಆಹಾರ ಇಲಾಖೆಯಂತಹ ಪ್ರಮುಖ ಇಲಾಖೆಗಳು ಗಾಢನಿದ್ರೆ ಅಥವಾ ಭ್ರಷ್ಟಾಚಾರಕ್ಕೆ ಒಳಗಾದರೆ ಏನಾಗುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಉತ್ತಮ ನಿದರ್ಶನ. ಬೆಂಗಳೂರು ಅಥವಾ ಮಂಗಳೂರಿಗೆ ಶಿರಾಡಿ ಘಾಟ್ ಮೂಲಕ ತೆರಳುವಾಗ ಕಡಿಮೆ ಬೆಲೆಗೆ ಸಿಗುವ ಗೋಡಂಬಿ ಕೊಳ್ಳುವವರು ಎಚ್ಚರದಿಂದಿರುವುದು ಒಳಿತು. ಹಾಫ್ ರೇಟ್, ಚೀಪ್ ರೇಟ್ ಎಂದು ಕೆಲವು ಯುವಕರು ಗೋಡಂಬಿ ತೋರಿಸಿ ನಿಮ್ಮನ್ನು ಯಾಮಾರಿಸುತ್ತಾರೆ. ಇವರು ಮಾರುವ ನಕಲಿ ಗೋಡಂಬಿ ಕೇವಲ 300 ರಿಂದ 500ರೂ. ಅಷ್ಟೇ. […]