ಕ್ಲಿನಿಕ್ ನಡೆಸುತ್ತಿದ್ದ ನಕಲಿ ವ್ಯೆದ್ಯ ಹಾಗೂ ಮಾಲೀಕನ ಬಂಧನ

ಬೆಂಗಳೂರು, ಡಿ.15- ಕ್ಲಿನಿಕ್‍ಗೆ ಬಂದಿದ್ದ ಮಹಿಳೆಗೆ ಯಾವುದೋ ಚುಚ್ಚು ಮದ್ದು ನೀಡಿ ಅಚಾತುರ್ಯಕ್ಕೆ ಕಾರಣನಾದ ನಕಲಿ ವೈದ್ಯ ಹಾಗೂ ಕ್ಲಿನಿಕ್ ಮಾಲೀಕನನ್ನು ರಾಜಗೋಪಾಲ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಕಲಿ ವೈದ್ಯ ಡಾ. ನಾಗರಾಜ್ ಹಾಗೂ ಕ್ಲಿನಿಕ್ ಮಾಲೀಕ ಕುಮಾರಸ್ವಾಮಿ ಬಂಧಿತರು. ಸಂಜೀವಿನಿ ನಗರದಲ್ಲಿ ಸಹನ ಪಾಲಿ ಕ್ಲಿನಿಕ್ ಇದ್ದು, ಶ್ರೀಗಂಧ ನಗರ ನಿವಾಸಿ, ಗಾರ್ಮೆಂಟ್ಸ್ ಉದ್ಯೋಗಿ ಜ್ಯೋತಿ ಎಂಬ ಮಹಿಳೆ ಜ್ವರಕ್ಕಾಗಿ ಈ ಕ್ಲಿನಿಕ್‍ಗೆ ಹೋದಾಗ ವೈದ್ಯ ನಾಗರಾಜ್ ಆಕೆಯನ್ನು ಪರೀಕ್ಷಿಸಿ ಸೊಂಟಕ್ಕೆ ಚುಚ್ಚುಮದ್ದು ನೀಡಿದ್ದಾರೆ. […]