ಧರ್ಮ ಮರೆಮಾಚಿ ವಿವಾಹವಾಗಲು ಹೋಗಿ ಸಿಕ್ಕಿಬಿದ್ದ

ನವದೆಹಲಿ,ಡಿ.13- ಧರ್ಮ ಮರೆಮಾಚಿ ಯುವತಿಯೊಬ್ಬರನ್ನು ವಿವಾಹವಾಗಲು ಯತ್ನಿಸಿದ್ದ ಆರೋಪಿಯೊಬ್ಬನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಬಂಧಿತ ಆರೋಪಿಯನ್ನು ಹಸೀನ್ ಸೈಫಿ ಎಂದು ಗುರುತಿಸಲಾಗಿದೆ. ಈತ ಗ್ರೇಟರ್‍ನೋಯ್ಡಾದಲ್ಲಿ ತನ್ನ ಧರ್ಮ ಮರೆ ಮಾಚಿ ಯುವತಿಯೊಬ್ಬರಿಗೆ ತನ್ನನ್ನು ಆಶೀಶ್‍ಠಾಕೂರ್ ಎಂದು ಗುರುತಿಸಿಕೊಂಡಿದ್ದ. ಮಾತ್ರವಲ್ಲ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಆಕೆಯನ್ನು ವಿವಾಹವಾಗಲು ಮುಂದಾಗಿದ್ದ ಎನ್ನಲಾಗಿದೆ. ಆತನ ಮದುವೆ ನಿನ್ನೆ ನಡೆಯಬೇಕಿದ್ದು, ಮೊನ್ನೆ ಆತನ ಬಂಡವಾಳ ಬಯಲಾಗಿದೆ. ಸಂತ್ರಸ್ಥ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಬಲವಂತದ […]