ರೈತರಿಗೆ ನೆರವಾಗಲು ಅಂಚೆ ಜಾಲ

ಬೆಂಗಳೂರು, ಫೆ.24- ಎಚ್ಡಿಎಫ್ಸಿ ಬ್ಯಾಂಕ್ನೊಂದಿಗೆ ಪಾಲುದಾರಿಕೆ ಮೂಲಕ ಆರ್ಥಿಕ ಸಹಾಯ ಅಗತ್ಯವಿರುವ ರೈತರಿಗೆ ನೆರವಾಗಲು ರಾಜ್ಯದಾದ್ಯಂತ ವಿಶಾಲವಾದ ಅಂಚೆ ಜಾಲವನ್ನು ಶೀಘ್ರದಲ್ಲೇ ಭಾರತ ಅಂಚೆ ಬಳಸಿಕೊಳ್ಳುತ್ತಿದೆ. ಕರ್ನಾಟಕ ಪೋಸ್ಟಲ್ ಸರ್ಕಲ್ ರೈತರಿಗೆ ಸಾಲ ವಿತರಿಸಲಿದೆ ಮತ್ತು ಅವರ ಪರವಾಗಿ ತನ್ನ ಕಚೇರಿಗಳಲ್ಲಿ ಇಎಂಐಗಳನ್ನು ಸಂಗ್ರಹಿಸಲಿದೆ. ರಾಜ್ಯದ ಅಂಚೆ ಇಲಾಖೆಯಿಂದ ಇದು ಮೊದಲ ಪ್ರಯತ್ನವಾಗಿದ್ದು, ಈ ಕ್ರಮದಿಂದ ರೈತರಿಗೆ, ಬ್ಯಾಂಕ್ ಹಾಗೂ ಅಂಚೆ ಇಲಾಖೆಗೆ ಅನುಕೂಲವಾಗುವ ನಿರೀಕ್ಷೆ ಇದೆ. ಭಾರತದ ಅಂಚೆ ಇಲಾಖೆಯ ಜಾಲವು ಬ್ಯಾಂಕ್ ಸೇವೆ ಎಟುಕ […]