ಕೃಷಿ ಕೆಲಸಗಳಿಗಾಗಿ ಡ್ರೋನ್‍ ಖರೀದಿಸುವವರಿಗೆ ಇಲ್ಲಿದೆ ಬಂಪರ್ ಸುದ್ದಿ..!

ನವದೆಹಲಿ, ಜ.23- ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, ಔಷ ಸಿಂಪಡಣೆ, ಸರಕು ಸಾಗಾಣಿಕೆ ಸೇರಿದಂತೆ ಹಲವು ಕೃಷಿ ಕೆಲಸಗಳಿಗೆ ಬಳಕೆಯಾಗುವ ಡ್ರೋನ್‍ಗಳ ಖರೀದಿಗೆ ಆರ್ಥಿಕ ನೆರವು ಘೋಷಣೆ ಮಾಡಿದೆ. ಭಾರತದಲ್ಲಿ ಕರಾರುವಾಕ್ಕಾದ ಆಧುನಿಕ ಕೃಷಿ ಪದ್ಧತಿಯ ಉತ್ತೇಜನಕ್ಕೆ ಬಲ ನೀಡುವ ಭಾಗವಾಗಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕೃಷಿ ವಲಯದ ಪಾಲುದಾರರಿಗೆ ಡ್ರೋನ್ ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಲು ಪ್ರಮುಖ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ. […]