ಎಫ್‍ಡಿಎ ಪ್ರಕಾಶ್ ವಿರುದ್ಧ ಕ್ರಮ ; ತಹಶೀಲ್ದಾರ್ ಭರವಸೆ
ಕೊಪ್ಪ, ಫೆ.9- ತಾಲ್ಲೂಕು ಕಚೇರಿಯಲ್ಲಿ ಕಡತ ನಾಪತ್ತೆ ಪ್ರಕರಣದ ಆರೋಪ ಎದುರಿಸುತ್ತಿರುವ ಈ ಹಿಂದಿನ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಂಬಂಧ ಕ್ರಮ ವಹಿಸುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ. ರೈತರು, ಬಡವರ ಫಾರಂ 50,53,57ರ ಕಡತ ನಿರ್ವಹಣೆ ಮಾಡುತ್ತಿದ್ದ ವಿಷಯ ನಿರ್ವಾಹಕ ಆರ್.ಪ್ರಕಾಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುೀರ್‍ಕುಮಾರ್ ಮುರೊಳ್ಳಿ ಮತ್ತು ಶಾಸಕ ಟಿ.ಡಿ.ರಾಜೇಗೌಡ ಅವರ ನೇತೃತ್ವದಲ್ಲಿ ಕೊಪ್ಪ ತಾಲ್ಲೂಕು ಕಚೇರಿ ಬಳಿ ನಿನ್ನೆ ಅನಿರ್ದಿಷ್ಟಾವ […]