ಫೆ.4ರಂದು ಘೋಷಿತ ಜೆಡಿಎಸ್ ಅಭ್ಯಥಿಗಳ ಸಭೆ

ಬೆಂಗಳೂರು,ಫೆ.2-ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತಂತೆ ಜೆಡಿಎಸ್‍ನ ಘೋಷಿತ ಅಭ್ಯರ್ಥಿಗಳೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ಫೆ.4ರಂದು ಜೆ.ಪಿ.ಭವನದಲ್ಲಿ ಪಕ್ಷದ ಅಭ್ಯರ್ಥಿಗಳ ಸಭೆಯನ್ನು ಕರೆಯಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಪ್ರಕಟಿಸಿರುವ 93 ಅಭ್ಯರ್ಥಿಗಳ ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಪಂಚರತ್ನ ರಥಯಾತ್ರೆ ಸೇರಿದಂತೆ ಆಯಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಸಿದ್ಧತೆ ಬಗ್ಗೆ ಅಭ್ಯರ್ಥಿಗಳು ಇದುವರೆಗೆ ಕೈಗೊಂಡಿರುವ ಕ್ರಮಗಳ ಪರಾಮರ್ಶೆಯನ್ನು ಸಭೆಯಲ್ಲಿ ಮಾಡಲಾಗುತ್ತದೆ.ವಿವಿಧ ಸಭೆ, ಕಾರ್ಯಗಾರಗಳ ಮೂಲಕ ಸಂಭವನೀಯ ಅಭ್ಯರ್ಥಿಗಳಿಗೆ ಚುನಾವಣೆ […]