ಶ್ರಾವಣ ಆರಂಭಕ್ಕೂ ಮುನ್ನವೇ ಗಗನಕ್ಕೇರಿದ ಬಾಳೆಹಣ್ಣಿನ ಬೆಲೆ..!

ಬೆಂಗಳೂರು, ಜು.27- ಆಷಾಢ ಮುಗೀತು ಶ್ರಾವಣ ಬಂತು… ಹಬ್ಬಗಳ ಸಾಲು ತಂತು… ಆದ್ರೆ ಅಗತ್ಯವಸ್ತುಗಳ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈಗ ಜಿಎಸ್‍ಟಿ ಹೊರೆ ಬೇರೆ ಹೊರಿಸಲಾಗಿದೆ. ಇದರಿಂದ ಜನಸಾಮನ್ಯರ ಬದುಕು ಅಕ್ಷರಶಃ ತೀವ್ರಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದರೆ, ಏನ್ ಮಾಡೋದು ನಮ್ಮ ಆಚಾರ, ಸಂಸ್ಕøತಿ ಪಾಲಿಸಲು ಹಬ್ಬಗಳನ್ನು ಆಚರಿಸಲೇಬೇಕು. ಈಗಾಗಲೇ ಅಡುಗೆ ಎಣ್ಣೆ, ಬೇಳೆಕಾಳುಗಳ ಬೆಲೆ ಸೆಂಚುರಿ ದಾಟಿವೆ. ಈ ಮಧ್ಯೆ ಹಣ್ಣುಗಳ ಸರದಿ ಪ್ರಾರಂಭವಾಗಿದೆ. ಶ್ರಾವಣ ಮಾಸದ […]