ಆಲಿಘರ್‍ನಲ್ಲೂ ಬಿರುಕು ಬಿಟ್ಟ ಮನೆಗಳು

ನವದೆಹಲಿ,ಜ.11-ಉತ್ತರಾಖಂಡದ ಜೋಶಿಮಠದ ಮಾದರಿಯಲ್ಲೇ ಆಲಿಘರ್‍ನಲ್ಲೂ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಲಿಘರ್‍ನ ಕನ್ವರಿಗಂಜ್‍ನಲ್ಲಿರುವ ಐದು ಮನೆಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜೋಶಿಮಠದ ಮಾದರಿಯಲ್ಲೇ ನಮ್ಮ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾವು ಭಯಭೀತರಾಗಿದ್ದೇವೆ. ಈ ಕುರಿತಂತೆ ನಾವು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗರ್ಭದಲ್ಲಿ ಆಳವಡಿಸಲಾಗುತ್ತಿರುವ ಪೈಪ್‍ಲೈನ್ ಸೋರಿಕೆಯಿಂದಾಗಿ ಮನೆಗಳು ಬಿರುಕು ಬೀಳುತ್ತಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಅನುಮಾನ […]