ಮಾರ್ಚ್ 23ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು,ಫೆ.8- ಬಹುನಿರೀಕ್ಷಿತ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮಾ.23ರಿಂದ 30ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಮಾ.23ರಂದು ಚಲನಚಿತ್ರೋತ್ಸವ ಉದ್ಘಾಟನೆಯಾಗಲಿದ್ದು, 26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರೋತ್ಸವದ ಅಂಗವಾಗಿ ಸಂವಾದ, ಚರ್ಚೆ, ವಿಚಾರ ಸಂಕಿರಣ, ಅತ್ಯುತ್ತಮ ನಿರ್ದೇಶಕರೊಂದಿಗೆ ಸಂವಾದ, ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.ಸರ್ಧಾ ವಿಭಾಗದಲ್ಲಿ ಏಷ್ಯಾ ಚಲನಚಿತ್ರಗಳು, ಭಾರತೀಯ ಚಲನಚಿತ್ರಗಳು, ಕನ್ನಡ ಚಲನಚಿತ್ರಗಳು, ಸಮಕಾಲೀನ ವಿಶ್ವ ಸಿನಿಮಾ, ಪುನರಾವಲೋಕನ ವಿಭಾಗ, ಭಾರತೀಯ ಸಿನಿಮಾ ಪುನರಾವಲೋಕನ, […]