ಕೇವಲ 30 ಮಂದಿ ಮೇಲೆ ಏಕೆ ಎಫ್‍ಐಆರ್..? : ಡಿಕೆಶಿ

ಕನಕಪುರ,ಜ.10-ಕೊರೋನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕಪ್ರ್ಯೂ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಆರೋಪಕ್ಕೆ ರ್ಯಾಲಿ ಮಾಡಬೇಡಿ ಎಂದು ನೋಟೀಸ್ ಕೊಟ್ಟಿದ್ದಾರೆ. ಇದು ಕಾನೂನು ಬಾಹಿರ. ಕಪ್ರ್ಯೂ ಉಲ್ಲಂಘಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಕೇವಲ 30 ಮಂದಿ ಮೇಲೆ ಏಕೆ ಎಫ್‍ಐಆರ್ ಹಾಕಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹಾಗೂ ಸಿದ್ಧರಾಮಯ್ಯ ಸೇರಿದಂತೆ ಮೂವತ್ತು ಮಂದಿ ಮೇಲೆ ಸಾತನೂರು ಠಾಣೆಯಲ್ಲಿಎಫ್‍ಐಆರ್ ದಾಖಲಾಗಿದೆ. ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದರಲ್ಲ, ಅವರ […]