ದಕ್ಷಿಣ ಆಫ್ರಿಕಾ ಸಂಸತ್ ಕಟ್ಟಡದಲ್ಲಿ ಬೆಂಕಿ

ಕೇಪ್‍ಟೌನ್, ಜ.2- ಇಲ್ಲಿರುವ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಂಸತ್ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದವರು ಅಗ್ನಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಗರದ ಮಧ್ಯಭಾಗದಲ್ಲಿರುವ ಈ ಕಟ್ಟಡದಿಂದ ಭಾರೀ ಹೊಗೆಯ ಮೋಡ ಹಾಗೂ ಬೆಂಕಿಯ ಜ್ವಾಲೆ ಮುಗಿಲೆತ್ತರಕ್ಕೆ ಎದ್ದಿರುವ ದೃಶ್ಯ ಗೋಚರಿಸುತ್ತಿದೆ. ಇಂದು ನಸುಕಿನ ಜಾವ ಈ ಕಟ್ಟಡದ ಮೂರನೆ ಮಹಡಿಯ ಕಚೇರಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ತತ್‍ಕ್ಷಣವೇ ಬೆಂಕಿಯ ಜ್ವಾಲೆ ನ್ಯಾಷನಲ್ ಅಸೆಂಬ್ಲಿ ಕೊಠಡಿಗೂ ವ್ಯಾಪಿಸಿವೆ ಎಂದು ಕೇಪ್‍ಟೌನ್ ಸಿಟಿ ಅಗ್ನಿಶಾಮಕ […]