ಹೊತ್ತಿ ಉರಿದ ಟಿಂಬರ್ ಯಾರ್ಡ್, 4 ಕೋಟಿ ಮೌಲ್ಯದ ಮರಮಟ್ಟುಗಳು ಭಸ್ಮ

ಬೆಂಗಳೂರು, ಜ.15- ಮಧ್ಯ ರಾತ್ರಿ ಬ್ಯಾಟರಾಯನಪುರದ ಟಿಂಬರ್ ಯಾರ್ಡ್ನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಬೆಲೆಬಾಳುವ ಮರಮಟ್ಟುಗಳು ಹಾಗೂ ಪ್ಲೇವುಡ್ಗಳು ಸುಟ್ಟುಹೋಗಿವೆ. ಮೈಸೂರು ರಸ್ತೆಯಲ್ಲಿರುವ ನ್ಯೂ ಟಿಂಬರ್ ಯಾರ್ಡ್ನ ಪ್ಲೇವುಡ್ ಮತ್ತು ಟಿಂಬರ್ ಡಿಪೋನಲ್ಲಿ ಮಧ್ಯರಾತ್ರಿ 12.45ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ 26ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿ 100ಕ್ಕೂ ಹೆಚ್ಚು ಸಿಬ್ಬಂದಿಗಳು ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಈ ಪ್ರದೇಶದಲ್ಲಿ ಹಲವಾರು ಪ್ಲೇವುಡ್ ಹಾಗೂ ಟಿಂಬರ್ ಡಿಪೋಗಳಿವೆ. […]