ದೀಪಾವಳಿ ಮುಗಿದರೂ ನಿಲ್ಲದ ಪಟಾಕಿ ಹಾವಳಿ

ಬೆಂಗಳೂರು,ನ.7- ಬೆಳಕಿನ ಹಬ್ಬ ದೀಪಾವಳಿ ಮುಗಿದರೂ ಪಟಾಕಿ ಹಾವಳಿ ಮಾತ್ರ ನಿಲ್ಲುತ್ತಿಲ್ಲ.ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇದುವರೆಗೂ ಸರಿ ಸುಮಾರು 150ಕ್ಕೂ ಹೆಚ್ಚು ಮಂದಿ ಬೆಳಕಿನ ಹಬ್ಬದ ಸಂದರ್ಭದಲ್ಲಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ. ದೀಪಾವಳಿ ಹಬ್ಬ ಮುಗಿದು ಹಲವು ದಿನಗಳೇ ಕಳೆದುಹೋಗಿದ್ದರೂ ಕಳೆದ ಒಂದು ವಾರದಲ್ಲೇ 11ಪ್ರಕರಣಗಳು ದಾಖಲಾಗಿರುವುದು ವಿಶೇಷವಾಗಿದೆ. ತುಳಸಿ ಪೂಜೆ, ಕಿರು ದೀಪಾವಳಿ, ಕ್ರಿಕೆಟ್ ಹೆಸರಿನಲ್ಲಿ ಇನ್ನು ಕೂಡ ಜನ ಪಟಾಕಿ ಸಿಡಿಸುತ್ತಿರುವುದರಿಂದ ಇಂತಹ ಅನಾಹುತಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ರಾಜ್ಯದಲ್ಲಿ […]