ಜ್ವಾಲಾಮುಖಿಯಿಂದ ತತ್ತರಿಸಿದ ಟೊಂಗಾದತ್ತ ಹೊರಟ ನೆರವಿನ ವಿಮಾನಗಳು

ವೆಲ್ಲಿಂಗ್ಟನ್,ಜ.20- ಪೆಸಿಫಿಕ್ ರಾಷ್ಟ್ರ ಟೊಂಗಾದಲ್ಲಿ ಭಾರಿ ಜ್ವಾಲಾಮುಖಿ ಸ್ಪೋಟಗೊಂಡ ನಂತರ ವಿಮಾನ ನಿಲ್ದಾಣದ ರನ್‍ವೇನಲ್ಲಿ ಉಂಟಾಗಿದ್ದ ಭಾರಿ ಬೂದಿಯ ರಾಶಿಯನ್ನು ತೆರವುಗೊಳಿಸಿದ ಬಳಿಕ ಶುದ್ಧ ನೀರು ಮತ್ತು ಇತರ ನೆರವಿನ ಸಾಮಗ್ರಿಗಳನ್ನು ಹೊತ್ತ ಮೊದಲ ವಿಮಾನ ಇಲ್ಲಿಂದ ಟೊಂಗಾಕ್ಕೆ ಹೊರಡಲು ಸಾಧ್ಯವಾಗಿದೆ. ನೀರಿನ ಕಂಟೈನರ್‍ಗಳು, ತಾತ್ಕಾಲಿಕ ಷೆಲ್ಟರ್‍ಗಳು, ಜನರೇಟರ್‍ಗಳು, ಪೋಷಕಾಂಶ ಪೂರೈಕೆಗಳು ಮತ್ತು ಸಂವಹನ ಸಾಧನಗಳನ್ನು ಒಳಗೊಂಡ ಎಸಿ-130 ಹಕ್ರ್ಯುಲಿಸ್ ಮಿಲಿಟರಿ ಸಾರಿಗೆ ವಿಮಾನ ನ್ಯೂಜಿಲೆಂಡ್‍ನಿಂದ ಹೊರಟಿದೆ ಎಂದು ನ್ಯೂಜಿಲೆಂಡ್‍ನ ವಿದೇಶಾಂಗ ಸಚಿವರಾದ ನನಯ್ಲಾ ಮಾಹುತಾ ಹೇಳಿದ್ದಾರೆ. […]