ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಸಿರು ಆಮೆ

ಚೆನ್ನೈ,ಜ.8- ತಮಿಳುನಾಡಿನ ರಾಮನಾಥಪುರಂನಲ್ಲಿ ಹಸಿರು ಆಮೆಯೊಂದು ಪತ್ತೆಯಾಗಿದೆ.ಪ್ಲಾಸ್ಟಿಕ್ ಮಾಲಿನ್ಯಕ್ಕೆ ಸಮುದ್ರ ಸಸ್ತನಿಗಳು ಸಾವನ್ನಪ್ಪುತ್ತಿದ್ದು, ಅದೇ ರೀತಿ ಮಾಲಿನ್ಯದಿಂದಾಗಿ ಪ್ರಾಣ ಕಳೆದುಕೊಳ್ಳುವ ಹಂತ ತಲುಪಿದ್ದ ಹಸಿರು ಆಮೆಯೊಂದನ್ನು ಮೀನುಗಾರರು ರಕ್ಷಿಸಿದ್ದಾರೆ. ಮೀನುಗಾರರು ಮೀನು ಹಿಡಿಯಲು ಬೀಸಿದ್ದ ಬಲೆಗೆ ಹಸಿರು ಆಮೆ ಸಿಲುಕಿಕೊಂಡಿತ್ತು. ಸಾವಿನ ಅಂಚಿನಲ್ಲಿದ್ದ ಆಮೆಯನ್ನು ರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಡುತ್ತಿರುವ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರಾಮನಾಥಪುರಂ ಜಿಲ್ಲೆಯ ಮರಿಯೂರ್ ಪ್ರದೇಶದಲ್ಲಿ ತಮಿಳುನಾಡು ಅರಣ್ಯ ಸಿಬ್ಬಂದಿ ಮತ್ತು ಮೀನುಗಾರರಿಂದ ಹಸಿರು ಆಮೆಯನ್ನು […]