5 ಮಂದಿ ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಹತಾಶೆಗೊಂಡ BSF ಯೋಧ

ಅಮೃತಸರ,ಮಾ.6-ಹತಾಶಗೊಂಡ ಯೋಧನೊಬ್ಬ ಗುಂಡು ಹಾರಿಸಿದ್ದರಿಂದ 5 ಮಂದಿ ಬಿಎಸ್‍ಎಫ್ ಜವಾನರು ಮೃತಪಟ್ಟಿರುವ ಘಟನೆ ಅಮೃತಸರದ ಖಾಸಾ ಗ್ರಾಮದ ನೆಲೆಯಲ್ಲಿ ನಡೆದಿದೆ. ಗ್ರಾಮದ ಬಿಎಸ್‍ಎಫ್ ನೆಲೆಯಲ್ಲಿ ಇಂದು ಬೆಳಗ್ಗೆ ಗುಂಡಿನ ಶಬ್ದ ಕೇಳಿಸಿದ್ದು, ಘಟನೆಯಲ್ಲಿ ಐದು ಮಂದಿ ಮೃತಪಟ್ಟಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕರ್ತವ್ಯ ನಿರ್ವಹಣೆಯ ಗಂಟೆಗಳ ಬಗ್ಗೆ ಅಸಮಾಧಾನ ಹೊಂದಿದ್ದ ಸಟ್ಟೆಪ್ಪ.ಎಸ್.ಕೆ ಎಂಬುವರು ಬಂದೂಕನ್ನು ವಾಪಸ್ ಇಡುವ ವೇಳೆ ಏಕಾಏಕಿ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ತಮ್ಮಷ್ಟಕ್ಕೆ ತಾವೇ ಶೂಟ್ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಸಟ್ಟೆಪ್ಪ ಸೇರಿದಂತೆ […]