ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳ ಸಾವು

ಹೈದರಾಬಾದ್,ಜ.11- ಸ್ನಾನ ಮಾಡಲು ನದಿಗಿಳಿದ ಐವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಉಳಿದಿಬ್ಬರ ಶೋಧ ಕಾರ್ಯ ನಡೆಯುತ್ತಿದೆ. ಏತನೂರು ಗ್ರಾಮದ 12 ವರ್ಷದ ಅಜಯ್, ಚರಣ್, ಬಾಲಯೇಸು, ರಾಕೇಶ್ ಮತ್ತು ಸನ್ನಿ ಎಂಬುವರು ನಿನ್ನೆ ನದಿಗಿಳಿದಿದ್ದರು. ಈ ವೇಳೆ ಐವರೂ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಮೂವರ ಮೃತದೇಹಗಳು ಪತ್ತೆಯಾಗಿವೆ. ನದಿಯ ದಡದಲ್ಲಿ ವಿದ್ಯಾರ್ಥಿಗಳ ಸೈಕಲ್‍ಗಳು ಮತ್ತು ಬಟ್ಟೆಗಳು ಬಿದ್ದಿದ್ದವು ಇದನ್ನ ಕಂಡ ಸ್ಥಳೀಯ ನಿವಾಸಿಗಳಿಗೆ ಮಕ್ಕಳು ನೀರಿನಲ್ಲಿ ಮುಳುಗಿರುವುದು […]