ಶಾಲಾ ಆವರಣದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಐವರು ಶಿಕ್ಷಕರು ಸಸ್ಪೆಂಡ್

ರಾಯಚೂರು, ಡಿ.25- ವಿದ್ಯಾರ್ಥಿಗಳ ಮುಂದೆಯೇ ಕುಡಿದು ಕುಪ್ಪಳಿಸಿದ ಐವರು ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತು ಗೊಳಿಸಿದ್ದಾರೆ. ಲಿಂಗಸೂರು ಪಟ್ಟಣದ ಹಟ್ಟಿ ಚಿನ್ನದ ಗಣಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮದ್ಯದ ಬಾಟಲಿಯನ್ನು ಹಿಡಿದು ನರ್ತಿಸಿದ್ದ ಶಿಕ್ಷಕರ ವರ್ತನೆಯನ್ನು ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ ನಂತರ ಅವರನ್ನು ಅಮಾನತ್ತುಗೊಳಿಸಲಾಗಿದೆ. ಮುಖ್ಯಶಿಕ್ಷಕ ಮುರಳೀಧರ್ ರಾವ್, ದೈಹಿಕ ಶಿಕ್ಷಕ ಚೆನ್ನಪ್ಪ ರಾಥೋಡ್ ಶಿಕ್ಷಕರಾದ ಲಿಂಗಪ್ಪ ಪೂಜಾರಾ, ಕೇಶವ್ ಕುಮಾರ್, ಅಬ್ದುಲ್ ಅಜೀಜ್ ಎಣ್ಣೆ ಪಾರ್ಟಿ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿದವರಾಗಿದ್ದಾರೆ. ಚಳಿಗಾಲದ ಚಂಡಮಾರುತಕ್ಕೆ […]