ಬಾಂಗ್ಲಾ ಅಕ್ರಮ ನುಸಳುಕೋರರಿಗೆ 5 ವರ್ಷ ಜೈಲು ಶಿಕ್ಷೆ

ಧುಬ್ರಿ, ಆ.20- ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿದ ಇಬ್ಬರಿಗೆ ಅಸ್ಸಾಂನ ಜಿಲ್ಲಾ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಸ್ಸಾಂನ ಮಂಕಚರ್ ಜಿಲ್ಲೆಯ ದಕ್ಷಿಣ ಸಲ್ಮಾರದ ಜಿಲ್ಲಾ ನ್ಯಾಯಾಲಯ ಅಕ್ರಮ ನುಸುಳುಕೋರರಾದ ನಿರಂಜನ್ ಘೋಶ್ ಮತ್ತು ಅಬ್ದುಲ್ ಹೈ ಎಂಬುವರಿಗೆ ಐದು ವರ್ಷ ಶಿಕ್ಷೆ ಮತ್ತು ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳ ಕಾಲ ಶಿಕ್ಷೆ ಅನುಭವಿಸಲು ಸೂಚಿಸಲಾಗಿದೆ. 2021ರ ಮಾರ್ಚ್ 6ರಂದು ಅಬ್ದುಲ್ ಹೈ ಅವರನ್ನು […]