ಸಂಸತ್ ಸಂಕೀರ್ಣದಲ್ಲೇ ಪ್ರತಿಪಕ್ಷಗಳ ಪ್ರತಿಭಟನೆ

ನವದೆಹಲಿ, ಮಾ.21-ಎಂದಿನಂತೆ ಸಂಸತ್ತಿನ ಉಭಯ ಸದನಗಳ ಕಲಾಪ ಮತ್ತೆ ಮುಂದೂಡಿಕೆಯಾಗಿದ್ದು, ಪ್ರತಿಪಕ್ಷಗಳು ಅದಾನಿ ಗುಂಪಿನ ಷೇರು ಮೌಲ್ಯ ಹೆಚ್ಚಳ ಹಗರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸುವಂತೆ ಒತ್ತಾಯಿಸಿ ಸಂಸತ್ ಭವನದಲ್ಲೇ ಪ್ರತಿಭಟನೆ ನಡೆಸಿವೆ. ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರು, ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರ ಬೇಷರತ್ ಕ್ಷಮೆಗೆ ಪಟ್ಟುಹಿಡಿದಿವೆ. ಈ ಗೊಂದಲದಿಂದಾಗಿ ಕಳೆದ ಏಳು ದಿನದ ಕಲಾಪದಲ್ಲಿ ಯಾವುದೇ ಚರ್ಚೆಯಾಗದೆ, ಸಮಯ ವ್ಯರ್ಥವಾಗಿದೆ. ಇಂದು ಬೆಳಗ್ಗೆ ರಾಜ್ಯಸಭೆ […]

3ನೇ ಮಹಡಿಯಿಂದ ಆಯತಪ್ಪಿ ಬಿದ್ದು 3 ಕಾರ್ಮಿಕರಿಗೆ ಗಾಯ

ಬೆಂಗಳೂರು, ಸೆ. 29- ಸಿಮೆಂಟ್ ಪ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದಾಗ ಮೂರನೇ ಮಹಡಿಯಿಂದ ಆಯತಪ್ಪಿ ಬಿದ್ದು ಮೂವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಕೆರೆಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡವಿದ್ದು , ಸಿಮೆಂಟ್ ಪ್ಲಾಸ್ಟಿಂಗ್‍ಗಾಗಿ ಸಾರ್ವೆ ಕಟ್ಟಲಾಗಿದೆ. ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಮೂವರು ಕಾರ್ಮಿಕರು ಸಾರ್ವೆ ಮೇಲೆ ನಿಂತುಕೊಂಡು ಮೂರನೆ ಮಹಡಿಯಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸಾರ್ವೆಯ ಗಳ (ಬೊಂಬು)ಗಳು ಕಳಚಿಕೊಂಡಿದ್ದರಿಂದ ಮೂವರೂ ಕೆಳಗೆ ಬಿದ್ದು […]