ಬಜೆಟ್ ಹೈಲೈಟ್ಸ್ : ಇ-ಕೋರ್ಟ್‍ಗೆ 7 ಸಾವಿರ ಕೋಟಿ

ನವದೆಹಲಿ,ಫೆ.1- ನ್ಯಾಯದ ಸಮರ್ಥ ಆಡಳಿತಕ್ಕಾಗಿ, ಸುಮಾರು 7 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದ ಇ-ನ್ಯಾಯಾಲಯಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬಜೆಟ್ ಮಂಡಿಸಿದ ಅವರು, ಕೋವಿಡ್ ಅವಯಲ್ಲಿ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ವಿಫಲವಾದ ಎಂಎಸ್‍ಎಂಇಗಳಿಗೆ ನೆರವು ನೀಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ಮತ್ತು ಅರೆ ಸರ್ಕಾರಿ ವಲಯದಲ್ಲಿನ ಶೇ.95ರಷ್ಟು ಸಂಸ್ಥೆಗಳಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ಬಿಡ್ ಅಥವಾ ಕಾರ್ಯಕ್ಷಮತೆಯ ಭದ್ರತಾ ಠೇವಣಿಯನ್ನು ವಾಪಾಸ್ ಮಾಡಲಾಗುತ್ತದೆ. ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಬಹಳ […]