ಗಡಿಯಲ್ಲಿ ಒಳನುಸುಳಲೆತ್ನಿಸಿದ ಪಾಕ್ ಉಗ್ರರ ವಿಫಲ ಯತ್ನ

ಜಮ್ಮು, ಆ.23 – ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲಾಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಗುಂಪಿನ ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಮಧ್ಯರಾತ್ರಿ ನೌಶೇರಾ ಸೆಕ್ಟರ್‍ನಲ್ಲಿ ನುಸುಳುಕೋರರ ಚಲನವಲನ ಕಂಡುಬಂದಿದ್ದು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಕ್ಷಣಾಪಡೆ ವಕ್ತಾರರು ತಿಳಿಸಿದ್ದಾರೆ. ಭಯೋತ್ಪಾದಕರ ಗುಂಪು ಗಡಿಯಾಚೆಯಿಂದ ಕತ್ತಲೆಯಲ್ಲಿ ಹೊದಿಕೆ ಮುಚ್ಚಿಕೊಂಡು ನೌಶೇರಾದ ಲಾಮ್ನ ಪುಖಾನಿರ್ ಗ್ರಾಮಕ್ಕೆ ನುಸುಳಲು ಪ್ರಯತ್ನಿಸಿತು. ರಾತ್ರಿ 10 ಗಂಟೆ ವೇಳೆ ಭಯೋತ್ಪಾದಕನೊಬ್ಬ ನೆಲಬಾಂಬ್ […]