ಬೆಂಗಳೂರಲ್ಲಿ ಫುಡ್ ಡೆಲಿವರಿ ಬಾಯ್ ಮತ್ತು ಟೆಂಪೋ ಚಾಲಕನ ಬರ್ಬರ ಕೊಲೆ

ಬೆಂಗಳೂರು, ಫೆ.11- ನಗರದಲ್ಲಿ ರಾತ್ರಿ ವರ್ತೂರು ಹಾಗೂ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಟೆಂಪೋ ಚಾಲಕ ಹಾಗೂ ಫುಡ್ ಡೆಲವರಿ ಬಾಯ್ ಕೊಲೆಯಾಗಿದ್ದಾರೆ. ದೊಮ್ಮಸಂದ್ರ ನಿವಾಸಿ, ಟೆಂಪೋ ಚಾಲಕ ಮುನಿಯಪ್ಪ(45) ಮತ್ತು ಕೊಣನ ಕುಂಟೆ ನಿವಾಸಿ, ಫುಡ್ ಡೆಲವರಿ ಬಾಯ್ ಶರತ್ ಕುಮಾರ್(24) ಕೊಲೆಯಾದ ದುರ್ದೈವಿಗಳು. ಚಾಡಿ ಹೇಳಿದ ಟೆಂಪೋ ಚಾಲಕನ ಕೊಲೆ :ತನ್ನ ಬಗ್ಗೆ ತಂದೆ ಬಳಿ ಕೆಟ್ಟದ್ದಾಗಿ ಹೇಳಿದ್ದಾರೆಂದು ಟೆಂಪೋ ಚಾಲಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವರ್ತೂರು ಪೆÇಲೀಸ್ […]
ಫುಡ್ ಡಿಲೇವರಿ ಯುವಕನಿಗೆ ಚಾಕು ತೋರಿಸಿ ದರೋಡೆ: ಮೂವರ ಬಂಧನ

ಬೆಂಗಳೂರು,ಜ.12- ಅಪಘಾತ ವಾಗಿದೆ ಎಂಬಂತೆ ನಟಿಸಿ ನೆರವಿಗೆ ದಾವಿಸಿದ ಫುಡ್ ಡಿಲೇವರಿ ಯುವಕನಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಸಂಪಿಗೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿ 12 ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಬೈಕ್‍ಗಳು, 2 ಮೊಬೈಲ್ ಫೋನ್ ಹಾಗೂ ಬೆಳ್ಳಿಯ ಚೈನ್‍ನನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕದ ಮುಬಾರಕ್ ಅಲಿಯಾಸ್ ಡೂಮ್(20), ಇಸ್ಮಾಯಿಲ್ ಅಲಿಯಾಸ್ ಜಿಶಾನ್(19) ಮತ್ತು ಅಗ್ರಹಾರ ಲೇಔಟ್‍ನ ಸುನೀಲ್ ಅಲಿಯಾಸ್ ಚಿತ್ತು ಅಲಿಯಾಸ್ ಮಹೇಶ್(20) ಬಂತರು. ಕಳೆದ ಮೇ 4ರಂದು ಬೆಳಗಿನ […]
ಜೈಲಲ್ಲಿ ಹೊಟ್ಟೆ ಬಿರಿಯೋಹಾಗೆ ತಿಂದು 8 ಕೆಜಿ ತೂಕ ಹೆಚ್ಚಿಸಿಕೊಂಡ ಸತ್ಯೇಂದ್ರ ಜೈನ್

ನವದೆಹಲಿ, ನ.23- ಭ್ರಷ್ಟಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ದೇಹ ತೂಕ ಕಳೆದುಕೊಂಡಿಲ್ಲ, ಬದಲಾಗಿ ಎಂಟು ಕೆಜಿಯಷ್ಟು ಹೆಚ್ಚಾಗಿದ್ದಾರೆ ಎಂದು ಬಂಧಿಖಾನೆ ಇಲಾಖೆಯ ಮೂಲಗಳು ತಿಳಿಸಿವೆ. ಜೈಲಿನಲ್ಲಿ ಸತ್ಯೇಂದ್ರ ಜೈನ್ ಶಿಕ್ಷೆ ಅನುಭವಿಸುತ್ತಿಲ್ಲ, ಮಜಾ ಮಾಡುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ. ನಿನ್ನೆ ಬಿಜೆಪಿ ವಕ್ತಾರರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಸತ್ಯೇಂದ್ರ ಜೈನ್ ಅದ್ಧೂರಿ ಹಾಗೂ ಐಶರಾಮಿ ಆಹಾರ ಸೇವಿಸುತ್ತಿರುವುದು ಕಂಡು ಬಂದಿತ್ತು. ಜೈಲಿನಲ್ಲಿರುವ ಖೈದಿಯೊಬ್ಬರು […]
ಆನ್‍ಲೈನ್ ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

ಬೆಂಗಳೂರು, ನ.14- ಆನ್‍ಲೈನ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸೈಬರ್ ಸಂಬಂಧಿತ ಅಪರಾಧಗಳಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಲು ಹೋಗಿ ಇಂಜಿನಿಯರ್ ಸೇರಿದಂತೆ ನಗರದ ಇಬ್ಬರು ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಇಂಜಿನಿಯರ್ ದೀಪಿಕಾ ಎಂಬುವರು ಫೆಸ್‍ಬುಕ್ ಖಾತೆಯಲ್ಲಿನ ಜಾಹಿರಾತು ನೋಡಿ ಅದರಲ್ಲಿದ್ದ ಫೋನ್ ನಂಬರ್‍ಗೆ ಫುಡ್ ಆರ್ಡ್‍ರ್ ಮಾಡಲು ಕರೆ ಮಾಡಿದ್ದಾರೆ, ಕರೆ ಸ್ವೀಕರಿಸಿದ ವ್ಯಕ್ತಿ ಖಾಂದಾನಿ ರಾಜಧಾನಿ ರೆಸ್ಟೋರೆಂಟ್ ಎಂದು ಪರಿಚಯಿಸಿಕೊಂಡಿದ್ದಾರೆ. ಆರ್ಡರ್ ಬುಕ್ ಮಾಡಲು ನಾವು ಕಳುಹಿಸುವ ಲಿಂಕ್‍ನಲ್ಲಿರುವ […]
ಶೌಚಾಲಯದಲ್ಲೇ ಕಬಡ್ಡಿ ಆಟಗಾರರಿಗೆ ಊಟೋಪಚಾರ : ಕ್ರೀಡಾ ಅಧಿಕಾರಿ ಸಸ್ಪೆಂಡ್
ಉತ್ತರಪ್ರದೇಶ, ಸೆ. 20- ಇತ್ತೀಚೆಗೆ ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕ್ರೀಡಾಪಟುಗಳಿಗೆ ಶೌಚಾಲಯದಲ್ಲೇ ಊಟದ ವ್ಯವಸ್ಥೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕ್ರೀಡಾ ಅಧಿಕಾರಿಯೊಬ್ಬರನ್ನು ಯೋಗಿ ಸರ್ಕಾರ ಅಮಾನತುಗೊಳಿಸಿದೆ. ಉತ್ತರಪ್ರದೇಶದ ಶಹರಾನ್‍ಪುರ್‍ನಲ್ಲಿ ಹಮ್ಮಿಕೊಂಡಿದ್ದ ಅಂಡರ್ 17 ಬಾಲಕಿಯ ಕ್ರೀಡಾಕೂಟದ ವೇಳೆ ಶೌಚಾಲಯದಲ್ಲೇ ಅಡುಗೆ ಮಾಡಿ ಬಡಿಸಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ವಿಡಿಯೋವನ್ನು ವೀಕ್ಷಿಸಿದ ಕ್ರೀಡಾ ಸಚಿವರು ಹಾಗೂ ಅಧಿಕಾರಿಗಳು ಶೌಚಾಲಯದಲ್ಲೇ ಕಬಡ್ಡಿ ಆಟಗಾರ್ತಿ ಯರಿಗೆ ಊಟದ ವ್ಯವಸ್ಥೆ ಮಾಡಿರುವುದು ದುರದೃಷ್ಟದ ಸಂಗತಿಯಾಗಿರುವುದರಿಂದ ಸ್ಥಳೀಯ ಕ್ರೀಡಾ […]
ವಿಷ ಆಹಾರ ಸೇವಿಸಿ 30 ಮಕ್ಕಳು ಅಸ್ವಸ್ಥ
ಮದ್ದೂರು,ಸೆ.17- ತಾಲೂಕಿನ ಅಂಬರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿ 30 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಶಾಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳಿದ್ದು, 48 ಮಕ್ಕಳು ಶಾಲೆಗೆ ಹಾಜರಾಗಿದ್ದರು. ಮಧ್ಯಾಹ್ನದ ಬಿಸಿಯೂಟದ ಸಾಂಬಾರಿಗೆ ಹಲ್ಲಿ ಬಿದ್ದಿದ್ದು, ಮಕ್ಕಳು ಊಟದ ತಟ್ಟೆಯಲ್ಲಿ ಹಲ್ಲಿಯ ತುಂಡುಗಳು ಕಾಣಿಸಿಕೊಂಡು ಶಿಕ್ಷಕರಿಗೆ ತಿಳಿಸಿದಾಗ ಮುಖ್ಯ ಶಿಕ್ಷಕಿ ಲಕ್ಷ್ಮೀ ಮಕ್ಕಳು ಊಟ ಮಾಡದಂತೆ ತಡೆದು ತಕ್ಷಣ ಮಕ್ಕಳಿಗೆ ಉಪ್ಪಿನ ನೀರನ್ನು ಕುಡಿಸಿ ವಾಂತಿ ಮಾಡಿಸಿದ್ದಾರೆ. ನಂತರ ಮಕ್ಕಳಲ್ಲಿ ವಾಂತಿ […]
ಊಟದ ವಿಷಯಕ್ಕೆ ಹಾದಿರಂಪ ಬೀದಿರಂಪ ಮಾಡಿದ ಪೊಲೀಸ್ ಕಾನ್ಸ್‌ಟೇಬಲ್
ಫಿರೋಜಾಬಾದ್,ಆ.11- ಪೊಲೀಸ್ ಮೆಸ್‍ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಕಾನ್ಸ್‍ಟೇಬಲ್ ವೊಬ್ಬರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್ಲಾಗಿದೆ. ಫಿರೋಜಾಬಾದ್‍ನ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನ ಮೆಸ್‍ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ರೊಟ್ಟಿ ದಾಲ್ ಮತ್ತು ಚಟ್ನಿ ಇರುವ ಆಹಾರದ ಪ್ಲೇಟ್‍ನ್ನು ಹಿಡಿದುಕೊಂಡು ಪೊಲೀಸ್ ಕಾನ್ಸ್‍ಟೇಬಲ್ ಸ್ಟೆಬಲ್ ಮನೋಜ್‍ಕುಮಾರ್ ರಸ್ತೆಗೆ ಬಂದಿದ್ದಾರೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮುಂದೆ ಹೋಗಿ ನಾಯಿಯೂ ತಿನ್ನದಂತಹ ಕೆಟ್ಟ ಆಹಾರವನ್ನು ನಮಗೆ ನೀಡಲಾಗುತ್ತಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ […]